ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಮಾಜಿಕ ಸುಧಾರಣೆ ತರಲು ಯತ್ನಿಸಿದ ದಾಸ ಸಾಹಿತ್ಯ

Lingaraj Badiger
Updated On : 26 Dec 2013, 11:35 am

ನರಸಿಂಹರಾಜಪುರ: 15- 16ನೇ ಶತಮಾನದಲ್ಲಿ ಮೂಡಿ ಬಂದ ದಾಸ ಸಾಹಿತ್ಯವು ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಯತ್ನಿಸಿತ್ತು ಎಂದು ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಮುಕಾರ್ತಿಹಾಳ್ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ರಾಮಕ್ಕಮ್ಮ ಮತ್ತು ದಿ. ಆರ್. ಪೆರಮಯ್ಯ ಅವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು.
ಹರಿದಾಸರ ಕೀರ್ತನೆಗಳು ಸಾಹಿತ್ಯ ರಚನೆಯ ಉದ್ದೇಶದಿಂದ ರಚನೆಯಾಗಿದ್ದಲ್ಲ. ಅವೆಲ್ಲಾ ಕೇವಲ ದೈನಂದಿನ ಆಗುಹೋಗುಗಳಿಗೆ ತೋರಿಸಿದ ಪ್ರತಿಕ್ರಿಯೆಗಳಾಗಿವೆ. ದಾಸ ಸಾಹಿತ್ಯದಲ್ಲಿ ಸಮಾಜದ ಹಿತ ಅಡಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ದತ್ತಿ ದಾನಿಗಳ ಸಾಹಿತ್ಯ ಸೇವೆಯಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅನೇಕ ವಿಚಾರಗಳು ಕನ್ನಡಿಗರಿಗೆ ತಲುಪುತ್ತಿದೆ. ಜನರಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಲು ದತ್ತಿದಾನಿಗಳಿಂದ ಸಹಾಯವಾಗುತ್ತಿದೆ ಎಂದರು.
ಸಾಹಿತಿ ಎಂ.ಜಯಮ್ಮ ಮಾತನಾಡಿದರು. ಅಧ್ಯಕ್ಷತೆಯನ್ನು ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ ವಹಿಸಿದ್ದರು. ದತ್ತಿ ದಾನಿಗಳಾದ ಎಂ.ಪಿ. ಚಕ್ರಪಾಣಿ, ಪ್ರೌಢ ಶಾಲೆಯ ಉಪ ಪ್ರಾಂಶಪಾಲ ಎಂ.ಪ್ರಕಾಶ್, ಕಸಾಪ ಹಿರಿಯ ಸದಸ್ಯ ಸುಬ್ಬಣ್ಣ ನಾಡಿಗ್, ಕಸಾಪ ಗೌರವ ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ, ಕಸಾಪ ಮಾಜಿ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement