'ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ'
ತರೀಕೆರೆ: ಅಡಕೆ ಆರೋಗ್ಯಕ್ಕೆ ಹಾನಿಕಾರಕ ವಸ್ತು ಅಲ್ಲ ಎಂದು ಮ್ಯಾಮ್‌ಕೋಸ್ ನಿರ್ದೇಶಕ ಆರ್.ದೇವಾನಂದ್ ತಿಳಿಸಿದ್ದಾರೆ.
ಕಾಣದ ಕೈಗಳು ಮಾರುಕಟ್ಟೆಯಲ್ಲಿ ಅಡಕೆಯನ್ನು ನಿಸ್ತೇಜಗೊಳಿಸುವ ಹುನ್ನಾರ ನೆಡೆಸುತ್ತಿವೆ. ರೈತರು ಜಾಗೃತರಾಗಬೇಕು, ನಾನಾ ರೀತಿಯಲ್ಲಿ ಅಡಕೆ ಬೆಳೆಗಾರರು ಆಘಾತಕ್ಕೆ ಒಳಗಾಗಿದ್ದಾರೆ, ಅಡಿಕೆ ಜೊತೆ ಹೊಗೆಸೊಪ್ಪು ಸೇರಿಸಬಾರದು ಎಂಬುದು ನಮ್ಮ ವಾದವಾಗಿದೆ. ಶಿವಮೊಗ್ಗದಲ್ಲಿ ಡಿ. 30 ರಂದು ಅಡಕೆ ಬೆಳೆಗಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಳರು ವರದಿಗಾರರಿಗೆ ತಿಳಿಸಿದರು.
ಈ ಸಮಾವೇಶಕ್ಕೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಭಾಧ್ಯಕ್ಷರನ್ನು, ಜಿಲ್ಲೆಯ ಉಸ್ತುವಾರಿ ಸಚಿವರನ್ನು, ಸಂಸದರು ಮತ್ತು ಶಾಸಕರುಗಳನ್ನು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಪಾಲ್ಗೊಳ್ಳಲು ಮತ್ತು ಬೆಂಬಲಿಸಲು ಆಹ್ವಾನಿಸಲಾಗಿದೆ ಎಂದರು.