ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದು ಕಡೂರು ಬಂದ್

Vishwanath S
Updated On : 27 Dec 2013, 12:51 pm

ಕಡೂರು:  ಬರುವ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗು ಮೇವಿಗೆ ಕೊರತೆ ಬಾರದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತಿಯ ಜನತಾ ಪಕ್ಷದಿಂದ ಶುಕ್ರವಾರ ಕಡೂರು ಪಟ್ಟಣ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಹೆಚ್. ಶಂಕರ್ ತಿಳಿಸಿದರು.
 ಕಡೂರು- ಬೀರೂರು ಪಟ್ಟಣ ಸೇರಿದಂತೆ 34 ಹಳ್ಳಿಗಳಿಗೆ ನೀರೊದಗಿಸುವ ಭದ್ರಾ ಯೋಜನೆ ಕಾಮಗಾರಿ ಚುರುಕುಗೊಳಿಸುವಂತೆ ಹಾಗು ತಾಲೂಕಿನ ಪ್ರಮುಖ ನೀರಾವರಿ ಯೋಜನೆಯಾದ ಹೆಬ್ಬೆ ತಿರುವು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು.
 ಎತ್ತಿನ ಹೊಳೆಯಿಂದ ವೇದಾ ನದಿಗೆ ನೀರು ಹರಿಸಬೇಕು. ಕರಗಡ ಯೋಜನೆ ಪೂರ್ಣಗೊಂಡರೆ ವಿಷ್ಣು ಸಮುದ್ರ ಕೆರೆಗೆ ನೀರು ಹರಿಯಲಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.  
ಬೇಡಿಕೆಗಳ ಈಡೇರಿಕೆಗೆ ಆಗ್ರಹ: ತಾಲೂಕು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕಡೂರು ಪಟ್ಟಣಕ್ಕೆ ಪ್ರತ್ಯೇಕ ಪೋಲೀಸ್ ಠಾಣೆ ಮಂಜೂರು, ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ನೇಮಕ ಸೇಮಕ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
 ಮಾಜಿ ಶಾಸಕ ಡಾ ವೈ.ಸಿ.ವಿಶ್ವನಾಥ್ ಮಾತನಾಡಿ, ಪಟ್ಟಣದ ಸಾರ್ವಜನಿಕರು, ಹೋಟೆಲ್‌ಗಳ ಮಾಲೀಕರು, ವರ್ತಕರು, ಕಾಲೇಜುಗಳ ಸಂಘ ಸಂಸ್ಥೆಗಳು ಕೂಲಿ ಕಾರ್ಮಿಕರು, ರೈತರು ಆಟೋ ಚಾಲಕರು, ಖಾಸಗಿ ಬಸ್ಸು ಮಾಲೀಕರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
 ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ,ಪೆಟ್ರೋಲ್ ಬಂಕ್ ಮಂಜು,ತಾಲೂಕು ಪಂಚಾಯಿತಿ ಸದಸ್ಯ ಶಿವಕುಮಾರ್, ರಮಾ,ಪುರಸಭಾ ಸದಸ್ಯ ರಾಜೇಶ್, ಹಿರಿಯ ಮುಖಂಡರಾದ ಹೆಚ್.ವಿ.ಗಿರೀಶ್,ಶ್ರೀನಿನಾಸ್,ಸುರೇಶ್ ಮತ್ತಿತರರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement