ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಎಸ್‌ಎಸ್‌ಗೆ ನುಡಿನಮನ

Vishwanath S
Updated On : 27 Dec 2013, 12:51 pm

ಕ.ಪ್ರ.ವಾರ್ತೆ, ಕಡೂರು, ಡಿ.26 ನವೋದಯ ಸಾಹಿತ್ಯದ ಮೇರು ಶಿಖರ ಮತ್ತು ಕನ್ನಡ ಸಾಹಿತ್ಯ ಹಾಗೂ ಕಾವ್ಯ ಪ್ರಪಂಚದ ಧೃವತಾರೆಯಾಗಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಶಾಸಕ ವೈ. ಎಸ್.ವಿ. ದತ್ತ ವಿಷಾದ ವ್ಯಕ್ತಪಡಿಸಿದರು.  ಅವರು ಕಡೂರು ಪಟ್ಟಣದ ಕಸಾಪ ಭವನದಲ್ಲಿ ಏರ್ಪಡಿಸಿದ್ದ ಜಿ.ಎಸ್.ಎಸ್. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಂಬನಿ ಮಿಡಿದ ಅವರು, ಕವಿ ಜಿಎಸ್‌ಎಸ್ ರವರ ಕಾವ್ಯಗಳು ವೇದಾಂತಗಳಿದ್ದಂತೆ. ಅವರ ಕವಿತೆಗಳು ಸಂಗೀತದ ಮೂಲಕ ಮನೆ ಮಾತಾಗಿದ್ದವು ಎಂದರು.
ಕಡೂರು ತಾಲೂಕಿಗೂ ಜಿಎಸ್‌ಎಸ್ ಅವರಿಗೂ ಅವಿನಾಭಾವ ಸಂಬಂಧವಿದೆ. ಕಾರಣ ಅವರ ಪತ್ನಿ ಕಡೂರು ವಿಧಾನಸಭಾ ಕ್ಷೇತ್ರದ ಯಗಟಿಪುರ ಗ್ರಾಮದವರು ಎಂಬುವುದೇ ಪ್ರಮುಖ ಕಾರಣವಾಗಿದೆ. ಮೊದಲಿನಿಂದಲೂ ಹೋರಾಟದ ಮನೋಭಾವದ ಶಿವರುದ್ರಪ್ಪನವರು ತಮ್ಮ ಕಾವ್ಯಗಳಲ್ಲಿ ಚಾಟಿಯೇಟು ನೀಡಿರುವುದಲ್ಲದೆ ಸಮಾಜಕ್ಕೆ ಚಿಕಿತ್ಸಾ ಕಾವ್ಯಗಳನ್ನು ನೀಡಿದರು ಎಂದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್, ಕೆ. ಎಚ್. ಶಂಕರ್, ಸಾವಿತ್ರಿ ಗಂಗಪ್ಪ, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಚ್. ಶಂಕರ್, ಬಿ.ಜಿ. ಆನಂದಮೂರ್ತಿ, ಬಾಲು ಮಚ್ಚೇರಿ,ಪುಟ್ಟಪ್ಪ, ಹರೀಶ್, ಪ್ರಶಾಂತ್ ಸೇರಿದಂತೆ ಹಲವರು  ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement