ಫೆ.1ರಿಂದ ಶನೈಶ್ಚರಸ್ವಾಮಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
ಮೂಡಿಗೆರೆ: ಸ್ವಸ್ತಿಶ್ರೀ ಶಾಲಿವಾಹನ ಶಕ 1936 ನೇ ವಿಜಯ ನಾಮ ಸಂವತ್ಸರದ ಮಾಘಶುದ್ಧ ಬಿದಿಗೆಯ ದಿನವಾದ 2014ರ ಫೆ.1ರಿಂದ 3 ರವರೆಗೆ ಪಟ್ಟಣದ ಮೇಗಲಪೇಟೆಯ ಶನೈಶ್ಚರಸ್ವಾಮಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಬಿ. ಧರ್ಮವೀರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ 2014 ಫೆ.1 ರಿಂದ 3 ರವರಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದ್ದು, ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಶ್ರೀಬಿಂದುಮಾಧವಶ್ರೀ ಸಾನ್ನಿಧ್ಯ ವಹಿಸಲಿದ್ದು, ಶನೈಶ್ಚರಸ್ವಾಮಿ, ಆಂಜನೆಯ ಸ್ವಾಮಿ, ನವಗ್ರಹ ದೇವತೆಗಳ ಬಿಂಬ ಪ್ರತಿಷ್ಠೆ, ಜೀವ ಕಲಶಾಭಿಷೇಕ, ತತ್ವ ಕಲಶಾಭಿಶೇಕ ನೆರವೇರಿಸಲಿರುವರು ಎಂದು ವಿವರಿಸಿದರು.
ಕಮಿಟಿಯ ಸದಸ್ಯ ಮಂಚೇಗೌಡ, ಕಾರ್ಯದರ್ಶಿ ಬಾಲು ಇತರರಿದ್ದರು.