ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹಿರೇಕೊಡಿಗೆಯಲ್ಲಿ ಕುವೆಂಪು ಜನ್ಮದಿನ

Lingaraj Badiger
Updated On : 31 Dec 2013, 10:51 am

ಕ.ಪ್ರ.ವಾರ್ತೆ, ಕೊಪ್ಪ, ಡಿ. 30
ತಾಲೂಕಿನ ಹಿರೇಕೊಡಿಗೆ ಕುವೆಂಪು ಸಂದೇಶ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ದಿ. ಲಕ್ಕಲಳ್ಳಿ ಮಂಜಪ್ಪ ನಾಯ್ಕ್ ಮತ್ತು ಅಲೆಮನೆ ನಾಗಪ್ಪ ನಾಯ್ಕ್ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಸಪಾ ನಿಕಟಪೂರ್ವ ಅಧ್ಯಕ್ಷ ಎಚ್.ಎಂ. ರವಿಕಾಂತ್ ಮಾತನಾಡಿ, ಕುವೆಂಪು ಸಾರಿದ ವಿಶ್ವ ಮಾನವ ಸಂದೇಶ,ಅವರ ಕಾಲಘಟ್ಟದಲ್ಲಿ ನಡೆದ ವಿದ್ಯಾಮಾನ ಕಾವ್ಯರೂಪದಲ್ಲಿ ಮೂಡಿಬಂದಿದ್ದು, ಇಂದಿಗೂ ಪ್ರತಿಯೊಬ್ಬನಿಗೆ  ಮಾರ್ಗದರ್ಶನ ಹಾಗೂ ಸಮಾಜ ಪರಿವರ್ತನೆಗೆ ಹಾಕಿಕೊಟ್ಟ ದಾರಿಯಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯವಿದೆ ಎಂದರು.
ಕುವೆಂಪು ಪ್ರಭಾವ, ಅವರ ಪೂರ್ಣದೃಷ್ಟಿ, ಸರ್ವೋದಯ, ಸಮನ್ವಯ, ಮನುಜಮತ ಮತ್ತು ವಿಶ್ವಮತಗಳೆಲ್ಲಾ ಇಂದಿನ ಪೀಳಿಗೆ ಆದರ್ಶಪ್ರಾಯವಾಗಿದೆ ಎಂದರು.
ತಾಲೂಕು ಕಸಪಾ ಅಧ್ಯಕ್ಷ ಗುಡ್ಡೇತೋಟ ನಟರಾಜ್, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎಂ. ರಾಮಸ್ವಾಮಿ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಗಂಗಾಧರ್, ಕಸಬ ಹೋಬಳಿ ಘಟಕ ಅಧ್ಯಕ್ಷ ಎ.ಇ.ಅಶೋಕ್, ಹರಿಹರಪುರ ಹೋಬಳಿ ಘಟಕ ಅಧ್ಯಕ್ಷ ಎ.ಇ. ವೆಂಕಟೇಶ್, ಎಲ್.ಎಂ. ಪ್ರಕಾಶ್, ಎ.ಎನ್. ಮಂಜುನಾಥ್, ಎಸ್.ಎನ್. ಚಂದ್ರಕಲಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement