ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬರಕ್ಕೆ ಸ್ಪಂದಿಸದ ಅಧಿಕಾರಿಗಳು: ಆರೋಪ

Vishwanath S
Updated On : 1 Jan 2014, 1:15 am

ಕ.ಪ್ರ.ವಾರ್ತೆ ,  ತರೀಕೆರೆ ,  ಡಿ. 31
ತಾಲೂಕಿನ ಅನೇಕ ಹೋಬಳಿಗಳಲ್ಲಿ ಸಮರ್ಪಕವಾಗಿ ಮಳೆಯಾಗದೆ ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ, ಬೆಳೆ ನಾಶವಾಗಿ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ, ತೋಟಗಾರಿಕೆ ಕಂದಾಯ ಇಲಾಖೆ ಅಧಿಕಾರಿಗಳು ಬರಗಾಲದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆ ಮತ್ತು ಬೆಳೆನಾಶದ ಬಗ್ಗೆ ಸರ್ಕಾರಕ್ಕೆ ಯಾವುದೇ ರೀತಿಯ ವರದಿ ಕಳಿಸದೆ, ದೀರ್ಘ ಮೌನ ವಹಿಸಿದ್ದಾರೆ. ತಾಲೂಕಿನ ಅಜ್ಜಂಪುರ, ಶಿವನಿ ಮತ್ತು ಲಿಂಗದಹಳ್ಳಿ ಹೋಬಳಿಗಳಲ್ಲಿ ಮಳೆಯಾಗದೆ ಕೆರೆಗಳು ತುಂಬಿಲ್ಲ. ತಾಲೂಕಿನಲ್ಲಿ ಬತ್ತ, ಕಬ್ಬು ಮೆಕ್ಕೆಜೋಳ ಸಂಪೂರ್ಣವಾಗಿ ನಾಶವಾಗಿದೆ. ರೈತರು ಜಮೀನುಗಳಿಗೆ ಹಾಕಿದ ಅಸಲಿ ಬಂಡವಾಳ ವಾಪಸ್ ಬಂದಿಲ್ಲ. ಬರಗಾಲದಿಂದಾಗಿ ತೋಟ ಉಳಿಸಿಕೊಳ್ಳುವುದೇ ಬಹಳ ಕಷ್ಟವಾಗಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.
ವಿಷಾದಕರ: ಅಡಕೆ ಬೆಳೆ ನಿಷೇಧಕ್ಕೆ ಅಫಿಡವಿಟ್ ಹಾಕಿರುವುದು ವಿಷಾದಕರ. ಅಫಿಡವಿಟ್ ಹಾಕಿರುವುದು ಸುಳ್ಳೆ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ  ಕಾಂಗ್ರೆಸ್ ನಾಯಕರು ಉತ್ತರಿಸಬೇಕು. ಶಾಸಕರ ಹಿಂಬಾಲಕರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ. ದೂರು ನೀಡದ ಹಾಗೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯ ಶಾಸಕರ ವಿದೇಶ ಪ್ರವಾಸ ಖಂಡನೀಯ ಎಂದು ತಿಳಿಸಿದರು.
ಸ್ವಾಧಿನಕ್ಕೆ ತೆಗೆದುಕೊಳ್ಳಲಿ: ರೋಟರಿ ಸಂಸ್ಥೆ ಕಟ್ಟಡ ಪುರಸಭೆಗೆ ಸೇರಿದ್ದು ಎಂದು ತೀರ್ಪು ಬಂದಿದೆ. ತಡ ಮಾಡದೆ ಪುರಸಭೆಯವರು ಕಟ್ಟಡ ಸ್ವಾಧೀನಪಡಿಸಿಕೊಳ್ಳಬೇಕು.
ಪಟ್ಟಣದ ಕುಡಿಯುವ ನೀರಿನ ನಾಲ್ಕನೆ ಹಂತದ ಯೋಜನೆಗೆ ಈ ಕಟ್ಟಡ ಅಗತ್ಯವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ವೈದ್ಯ ಸಿಬ್ಬಂದಿ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಕೊಡಲಿ. ಸಂಸದರು ಅಭಿವೃದ್ಧಿ ಬಗ್ಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಟಿ.ಎಂ. ಭೋಜರಾಜ್, ಪುರಸಭೆ ಮಾಜಿ ಸದಸ್ಯ ಖಾಲಿಕ್ ಅಹಮದ್ ಅವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement