ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಹಿತ್ಯ, ಚಲನಚಿತ್ರ ಒಂದೇ ನಾಣ್ಯದ ಎರಡು ಮುಖ

Rashmi Kasaragodu
Updated On : 2 Feb 2013, 12:03 pm

ಗಳು


ಚಿಕ್ಕಮಗಳೂರು: ಸಾಹಿತ್ಯ ಮತ್ತು ಚಲನಚಿತ್ರ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಲಾವಿದ ಅಕ್ಕಿಕಾಳು ವೆಂಕಟೇಶ್ ಹೇಳಿದ್ದಾರೆ.
ನಗರದ ಗ್ರಂಥಾಲಯದ ಆವರಣದಲ್ಲಿ ಬೆಳ್ಳಿ ಮಂಡಲ ಇತ್ತೀಚೆಗೆ ಆಯೋಜಿಸಿದ್ದ ಚಲನಚಿತ್ರ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಚಲನಚಿತ್ರ ನಿರ್ಮಿಸುವುದು ಮತ್ತು ಒಂದು ಚಿತ್ರವನ್ನು ಬಿಡಿಸುವುದು ತುಂಬಾ ಕಷ್ಟ. ಈ ದಿಸೆಯಲ್ಲಿ ಕಲಾಕೃತಿಗಳನ್ನು ನೋಡಬೇಕು, ಚಿತ್ರಕಲೆಯನ್ನು ಅಸ್ವಾದಿಸಬೇಕು ಮತ್ತು ಚಲನಚಿತ್ರಗಳನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು. ಪುಸ್ತಕ ಹೇಳುವುದನ್ನು ಒಂದು ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದೆ ಎಂದರು.  ಮುಖ್ಯ ಗ್ರಂಥಾಲಯಾಧಿಕಾರಿ ಎಫ್.ಎ. ಮಠಪತಿ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿವೆ. ಸಾಹಿತ್ಯದ ಅಧ್ಯಯನ ಚಲನಚಿತ್ರ ವಿಮರ್ಶೆ ಸಮಾಜದ ಉತ್ತಮ ಬದುಕಿನ ಅನುಷ್ಟಾನಕ್ಕೆ ಬಹು ದೊಡ್ಡ ಆಸ್ತ್ರವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಬೆಳ್ಳಿ ಮಂಡಲ ಆಯೋಜಿದ್ದ ದಸರಾ ಚಲನಚಿತ್ರೋತ್ಸವ ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಶೈಲಾ ರಾಜೀವ ಲೋಚನ ಮತ್ತು ಎಂ.ಆರ್. ಚಂದ್ರಶೇಖರ್ ಅವರಿಗೆ ಬಹುಮಾನ ವಿತರಿಸಲಾಯಿತು. ಬೆಳ್ಳಿಮಂಡಲ ಅಧ್ಯಕ್ಷ ಬಿ.ಎನ್. ಜ್ವಾಲನಪ್ಪ ಅಧ್ಯಕ್ಷತೆ ವಹಿಸಿದ್ದರು.ೆ. ಸದಾಶಿವ ಶೆಣೈ ನಿರ್ದೇಶನದ ಪವಿತ್ರಾ ಲೋಕೇಶ್ ಮತ್ತು ಸುಧಾಮೂರ್ತಿ ಅಭಿನಯಿಸಿರುವ ಪ್ರಾರ್ಥನೆ ಚಲನಚಿತ್ರವನ್ನು ಪ್ರದರ್ಶಿಸಲಾಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement