ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆರೋಗ್ಯ, ಪರಿಸರ ರಕ್ಷಣೆಗೆ ಆದ್ಯತೆ ಅಗತ್ಯ

Lingaraj Badiger
Updated On : 4 Feb 2013, 11:38 am

ಚಿಕ್ಕಮಗಳೂರು: ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ನಗರಸಭೆ ಅಧ್ಯಕ್ಷ ಸಿ.ಆರ್. ಪ್ರೇಮ್‌ಕುಮಾರ್ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ನಗರ ಹೊರ ವಲಯದ ವಿದ್ಯಾನಗರ ಬಡಾವಣೆಯಲ್ಲಿ ನಗರಸಭೆ ನಿರ್ಮಿಸಿರುವ ಉದ್ಯಾನವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರೋಗ್ಯಕ್ಕೆ ಉತ್ತಮ ಪರಿಸರ ಅತ್ಯಗತ್ಯ ಎಂದರು.
ಸಾರ್ವಜನಿಕರು ನೂತನ ಉದ್ಯಾನವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ವೃದ್ಧಿಸುವ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಚಿವ ಸಿ.ಟಿ. ರವಿಯವರ ಪ್ರಯತ್ನದಿಂದ ನಗರಸಭೆಗೆ 187 ಕೋಟಿ ಅನುದಾನ ದೊರೆತಿದ್ದು, ಇದರಿಂದ ನಗರದ ಎಲ್ಲಾ ವಾರ್ಡ್‌ಗಳಿಗೆ ಒಳಚರಂಡಿ ಸೇರಿದಂತೆ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಈ ವಾರ್ಡ್‌ನಲ್ಲಿ 2.5 ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ತಮ್ಮ ಅವಧಿಯಲ್ಲಿ ಮಾಡಲಾಗಿದೆ. ನಗರಸಭೆಯ ಎಲ್ಲಾ ಸದಸ್ಯರ ಮತ್ತು ಆಯುಕ್ತರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ಡಾ. ಸನ್ಮಯ ಗೌಡ ಮಾತನಾಡಿ, ನಗರಸಭೆ ವತಿಯಿಂದ ಶಾಶ್ವತ ಕೆಲಸಗಳಿಗೆ ಹೆಚ್ಚಿನ ಗಮನಹರಿಸುವುದರ ಜತೆಗೆ ನೂತನ ಪಾರ್ಕ್‌ಗೆ ಅಗತ್ಯವಿರುವ ನೀರು ಮತ್ತು ಗೇಟ್  ಒದಗಿಸಿಕೊಡುವಂತೆ ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಿದರು.
ಜಿಪಂ ಸದಸ್ಯ ಜೆ.ಡಿ. ಲೋಕೇಶ್, ಹಸ್ಯಭಾವ, ಸ್ಥಳೀಯರಾದ ಹಮೀದ್, ನಿಂಗರಾಜು, ನಿರ್ವಾಣೇಗೌಡ, ಕಮಲಮ್ಮ, ಯಶೋಧಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement