ನಾಳೆ ಯುವ ಜನ ಮೇಳ
ಚಿಕ್ಕಮಗಳೂರು: ಎನ್.ಆರ್. ಪುರ ತಾಲೂಕು ಮಟ್ಟದ ಯುವಜನ ಮೇಳ ಮಡಬೂರು ಕಾಲೋನಿಯ ಗಣಪತಿ ಮಂಟಪದಲ್ಲಿ ಫೆ. 5 ರಂದು ನಡೆಯಲಿದೆ. ಭಾವಗೀತೆ, ಗೀಗೀ ಪದಗಳು, ಲಾವಣಿ, ಕೋಲಾಟ, ವೀರಗಾಸೆ, ಡೊಳ್ಳುಕುಣಿತ, ರಂಗಗೀತೆ, ಜನಪದ ನೃತ್ಯ, ಜೋಳರಾಗಿ ಬಿಸುವ ಪದ, ಸೋಬಾನೆ ಪದಗಳು, ಭಜನೆ, ಜನಪದ ಗೀತೆ, ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಚರ್ಮವಾದ್ಯ ಮೇಳ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ನೋಂದಾಯಿತ ಯುವಕ, ಯುವತಿ ಮಂಡಳಿಯ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಬಹುದು.
ನಂಬಿಕೆ ಮೇಲೆ ವಿಶ್ವ
ತರೀಕೆರೆ: ನಂಬಿಕೆ ಮೇಲೆ ಜಗತ್ತು ನಿಂತಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್. ಮಂಜುನಾಥ್
ತಿಳಿಸಿದ್ದಾರೆ. ಪಟ್ಟಣದ ಇಂದಿರಾ ನಗರದ ಗಂಗಮ್ಮ ದೇವಾಲಯದಲ್ಲಿ ನೆಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ಎನ್. ಮಂಜುನಾಥ್, ಟಿ.ಎನ್. ಮಂಜುನಾಥ್ರನ್ನು ಸನ್ಮಾನಿಸಲಾಯಿತು. ಗೌಡರಕೃಷ್ಣ, ಪುರುಷೋತ್ತಮ, ರವಿಕುಮಾರ್, ಭಾಸ್ಕರ್, ಸತ್ಯನಾರಾಯಣ್ ಇದ್ದರು.
ಗ್ರಾಮಸ್ಥರ ಧರಣಿ
ಚಿಕ್ಕಮಗಳೂರು: ಕಡೂರು- ಚಿಕ್ಕಮಗಳೂರು ರೈಲ್ವೆ ಕಾಮಗಾರಿಗಾಗಿ ಬಂಡೆ ಸಿಡಿಸಿದಾಗ ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಮನೆಗಳಿಗೆ ಹಾನಿ ಸಂಭವಿಸಿದ್ದು, ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕಾಮಗಾರಿಗೆ ಅಡ್ಡಿಪಡಿಸಿ, ಸ್ಥಳದಲ್ಲೇ ಟಯರ್ಗಳಿಗೆ ಬೆಂಕಿ ಹಚ್ಚಿ ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾತನಬಿಡು ಸಮೀಪ ಹಳಿ ಹಾಕಲು ಕಲ್ಲಿನ ಬಂಡೆಯನ್ನು ಸ್ಪೋಟಕ ಬಳಸಿ ಸಿಡಿಸಲಾಗಿದ್ದು, ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ದೂರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.