ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಹಣಿಯಲ್ಲಿನ ಕ್ರೂಢೀಕರಣ ಪರಿಷ್ಕರಿಸಲು ಮನವಿ

Lingaraj Badiger
Updated On : 4 Feb 2013, 11:31 am

ಕಡೂರು: ಕಂದಾಯ ವಿಭಾಗದಿಂದ ರೈತರಿಗೆ ನೀಡುವ ಪಹಣಿಯಲ್ಲಿ ಮಾಡಲಾಗುವ ಕ್ರೂಢೀಕರಣವನ್ನು ಕಂದಾಯ ಇಲಾಖೆಯು ಪರಿಷ್ಕರಿಸಿ ಸರಿಪಡಿಸಿದಲ್ಲಿ ಕಡೂರು ತಾಲೂಕಿನ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ಎಂದು ಜೆಡಿಎಸ್ ಮುಖಂಡ ಕುಪ್ಪಾಳು ರೇಣುಕಾರಾಧ್ಯ ಕಂದಾಯ ಇಲಾಖೆಯ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಪಹಣಿಗಳ ಕ್ರೂಡೀಕರಣಗಳಲ್ಲಿ ನಮೂದಾಗುವ ಪಿ1 ಪಿ2 ಎಂಬ ಕ್ರೂಡೀಕರಣವನ್ನು ಪಹಣಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ಸರಿಪಡಿಸಿದಲ್ಲಿ ತಾಲೂಕಿನ ಸಾವಿರಾರು ರೈತರಿಗೆ  ಅನಕೂಲವಾಗುತ್ತದೆ.
ಈಗಾಗಾಲೇ ಪಹಣಿ ಕ್ರೂಡೀಕರಣಕ್ಕೆ ರೈತರು ವಾರಗಟ್ಟಲೆ ಸರ್ವೇ ಇಲಾಖೆಗೆ ಅಲೆಯುವುದು ತಪ್ಪುತ್ತದೆ. ಹಾಸನ ಜಿಲ್ಲೆಯಲ್ಲಿ ಈ ಕ್ರೂಡೀಕರಣ ಹಾಗೂ ಆಕಾರ ಬಂಧುವನ್ನು ಕಂದಾಯ ಇಲಾಖೆಯ ನೌಕರ ಅಧಿಕಾರಿ ವರ್ಗದವರೇ ಸಂಪೂರ್ಣವಾಗಿ ಮುಗಿಸಿ ರೈತರು ಅನಗತ್ಯವಾಗಿ ಸರ್ವೇ ಇಲಾಖೆಗೆ ಅಲೆಯುವುದನ್ನು ತಪ್ಪಿಸಿದ್ದಾರೆ ಎಂದರು.
ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿದಂತೆ ಎಲ್ಲ ತಾಲೂಕಿನಲ್ಲಿಯೂ ಇದೇ ರೀತಿ ಮಾಡಿದಲ್ಲಿ ಮೊದಲೇ ಬರಗಾಲದಿಂದ ಬೇಸತ್ತಿರುವ ಕಡೂರು ತಾಲೂಕಿನ ರೈತರಿಗೆ ಅಧಿಕಾರಿಗಳು ಸಣ್ಣ ಉಪಕಾರ ಮಾಡಿದಂತಾಗಿ ತಿಂಗಳುಗಟ್ಟಲೆ ಕಚೇರಿ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ. ಉಪವಿಭಾಗಾಧಿಕಾರಿಗಳು ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ರೇಣುಕಾರಾಧ್ಯ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement