ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೆಂಕಿ ಅವಘಡ: ಅಪಾರ ನಷ್ಟ

Lingaraj Badiger
Updated On : 4 Feb 2013, 11:31 am

ತರೀಕೆರೆ: ಪಟ್ಟಣದ ಬಿಎಚ್ ರಸ್ತೆಯ ಇಂಡಿಯನ್ ಮೋಟಾರ್ ರಿವೈಂಡಿಂಗ್ ಶಾಪ್‌ನಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಅನಾಹುತ ಸಂಭವಿಸಿ ಮೋಟಾರ್, ರಿವೈಂಡಿಂಗ್ ಮತ್ತಿತರ ವಸ್ತುಗಳು ಸುಟ್ಟುಹೋಗಿದೆ. ಸುದ್ದಿ ತಿಳಿದ ತಕ್ಷಣ ಅಗ್ಮಿ ಶಾಮಕ ದಳ ಆಗಮಿಸಿ  ಬೆಂಕಿ ನಿಯಂತ್ರಿಸಿತು.
ಬೈಕ್ ಡಿಕ್ಕಿ; ಗಾಯ
ನರಸಿಂಹರಾಜಪುರ: ಎರಡುಬೈಕ್‌ಗಳ ಪರಸ್ಪರ ಡಿಕ್ಕಿಯಿಂದ ಮೂವರು ಗಾಯಗೊಂಡಿರುವ ಘಟನೆ ದೇವಾಲೆ ಕುಣಜ ಹಾಗೂ ನಾಗರಮಕ್ಕಿ ಮಧ್ಯೆ ಸಂಭವಿಸಿದೆ. ನಾಗರಾಜ, ಶೇಖರ, ರಾಜೇಶ ಎಂಬವರು ಗಾಯಗೊಂಡವರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಜನ ಸ್ಪಂದನ ಕಾರ್ಯಕ್ರಮ
ನರಸಿಂಹರಾಜಪುರ: ಜನರು ಸಮಸ್ಯೆಗಳನ್ನು ಜನ ಸ್ಪಂದನ ಕಾರ್ಯಕ್ರಮದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಹಸೀಲ್ದಾರ್ ಎಚ್. ಕೃಷ್ಣಮೂರ್ತಿ ತಿಳಿಸಿದರು.  ಮಾಗುಂಡಿ ಗ್ರಾಪಂ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮೋಹನ್ ವಹಿಸಿದ್ದರು. ಉಪಾಧ್ಯಕ್ಷೆ ರಹಮತ್, ಸದಸ್ಯರಾದ ವೀಣಾ, ಪಾರ್ವತಿ, ಭಗವಾನ್, ಪ್ರಮೋದ್, ಸೋಮಣ್ಣ,  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement