ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೇಷಧಾರಿಗಳು....

Lingaraj Badiger
Updated On : 4 Feb 2013, 11:31 am

ಮೂಡಿಗೆರೆ: ಜೆ.ಸಿ.ಐ. ಮೂಡಿಗೆರೆ ವತಿಯಿಂದ ಸ್ವಾಮಿ ವಿವೇಕಾನಂದರ 150 ಜನ್ಮ ದಿನಾಚರಣೆ ಮತ್ತು 68 ನೇ ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ವೇಷಭೂಷಣ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಬಿಡಿಸುವ ಸ್ಪರ್ಧೆ ಮತ್ತು ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಮೂಡಿಗೆರೆ ಪಟ್ಟಣದ ಎಲ್ಲಾ ಶಾಲೆಗಳ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಆದರ್ಶ ಹೆಚ್.ವಿ. ಪ್ರಥಮ, ಅಪೂರ್ವ ಜಾನಮಟ್ಟಿ ದ್ವಿತೀಯ, ಸಾಧಿಯಾ ತೃತೀಯ ಸ್ಥಾನ ಪಡೆದರೆ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿರಾಗ್ ಗೌಡ ಪ್ರಥಮ, ದರ್ಶಿನಿ ದ್ವಿತೀಯ, ಶಾಂತಲ ತೃತೀಯ ಸ್ಥಾನ ಪಡೆದರು. ವೇಷಭೂಷಣ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಆಕೃತ್ ಪ್ರಥಮ, ನಾಗಶ್ರೀ ದ್ವಿತೀಯ, ಮನೀಶ್ ತೃತೀಯ ಸ್ಥಾನ ಪಡೆದರೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಹಮ್ಮದ್ ನಿಸ್ಸಾರ್ ಪ್ರಥಮ, ಅವಿನ್ ದ್ವಿತೀಯ, ಸೋಮಶೇಖರ್ ತೃತೀಯ ಬಹುಮಾನ ಗಳಿಸಿದರು.
ಮೂಡಿಗೆರೆ ಜೇಸಿ ಅಧ್ಯಕ್ಷ ಪ್ರಸನ್ನ ಗೌಡಹಳ್ಳಿ, ಕಾರ್ಯದರ್ಶಿ ಮಣಿಕಂಠ, ಜೇಸಿರೇಟ್ ಆಧ್ಯಕ್ಷೆ ಸುಚಿತ್ರ, ಪೂರ್ವಾಧ್ಯಕ್ಷರಾದ ರಮೇಶ್, ಅಣ್ಣಾನಾಯಕ್, ಪ್ರದೀಪ್, ತೇಜಸ್ವಿ, ವಿನೋದ್ ಕುಮಾರ್, ವಿಜಯ್ ಕುಮಾರ್, ಮಗ್ಗಲಮಕ್ಕಿ ಗಣೇಶ್, ಹರೀಶ್, ಜಯಪಾಲ್, ಅತುಲರಾವ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments