ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಬಡ್ಡಿ: ಮಲೆನಾಡು ಭದ್ರಾವತಿ ತಂಡಕ್ಕೆ ಪ್ರಶಸ್ತಿ

Lingaraj Badiger
Updated On : 5 Feb 2013, 10:55 am

ನರಸಿಂಹರಾಜಪುರ: ಕೊನೋಡಿ ಗ್ರಾಮದ ಬೆಮ್ಮನೆ ವಿನಾಯಕ ಗೆಳೆಯರ ಬಳಗದ ಆಶ್ರಯದಲ್ಲಿ ಬೆಮ್ಮನೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಮಲೆನಾಡು ಭದ್ರಾವತಿ ತಂಡವು ಪ್ರಥಮ ಹಾಗೂ ಕುದುರೆಗುಂಡಿ ಅಶ್ವ ಗುಂಡೇಶ್ವರ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆಯಿತು.
ಒಟ್ಟು 20 ತಂಡಗಳು ಬಾಗವಹಿಸಿದ್ದವು.ಪ್ರಥಮ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ನಗದು ಹಾಗೂ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 7.50 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಕಬಡ್ಡಿ ಪಂದ್ಯಾವಳಿಯನ್ನು ಕೊನೋಡಿ ಕೃಷಿಕರಾದ ಕೆ.ಆರ್. ರಾಮಚಂದ್ರ ಭಟ್ ಉದ್ಘಾಟಿಸಿದರು. ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಕೃತಿಕ ಎಚ್.ಪಿ.ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಿ.ಪಿ. ದಯಾನಂದ, ಗ್ರಾಮಸ್ಥರಾದ ತಿಮ್ಮಮ್ಮ, ಲಕ್ಷಣಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ  ಕೆ.ಎಸ್. ಉಮೇಶ್, ಎನ್.ಎಂ. ಬಾಬು ಪೂಜಾರಿ, ರಜನಿ ರಮೇಶ್, ಅಶ್ವಿನಿ, ವೀಣಾಶ್ರೀಧರ್ ಉಪಸ್ಥಿತರಿದ್ದರು.
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಆದಿಲ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ,ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್, ಗ್ರಾಪಂ ಸದಸ್ಯ ಎಚ್.ಇ. ದಿವಾಕರ, ತಾಲೂಕು ಬಗರ್ ಹುಕಂ ಸಮಿತಿ ಸದಸ್ಯ ವೈ.ಎಸ್. ಗಣೇಶ್, ಗ್ರಾಮ ಪಂಚಾಯ್ತಿ ಸದಸ್ಯ ಎನ್.ಪಿ. ರಮೇಶ್, ಗುಬ್ಬಿಗಾ ಗ್ರಾಪಂ ಸದಸ್ಯ ಸುಂದರೇಶ್ ಮತ್ತಿತರರು ಇದ್ದರು.
---
ರೈತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಮೂಡಿಗೆರೆ: ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಪ್ರಯೋಜಕತ್ವದಲ್ಲಿ ಕೋಕೋ ಬೆಳೆಯಲ್ಲಿ ಸಮಗ್ರ ಕೃಷಿ ಪದ್ಧತಿಗಳ ಕುರಿತು 6 ರವರೆಗೆ ಮೂರು ದಿನಗಳು ನಡೆಯುವ ರೈತ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ ಮೂಡಿಗೆರೆ ಸಮೀಪದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿ ಪರ ಕೃಷಿಕ ನಡ ಗ್ರಾಮದ ಬೆಳ್ತಂಗಡಿ ಪ್ರಭಾಕರಮಯ್ಯ, ಇಂದಿನ ಪರಿಸ್ಥಿತಿಯಲ್ಲಿ ಕೃಷಿಕರು ಮಿಶ್ರ ಬೆಳೆ ಪದ್ಧತಿಯನ್ನು ವೈಜ್ಞಾನಿಕವಾಗಿ ಅನುಸರಿಸುವ ಅಗತ್ಯತೆ ಇದೆ ಎಂದರು.
ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಪ್ರಭಾರಿ ಡೀನ್ ಡಾ.ಬಿ. ಹೇಮ್ಲಾನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರದ್ಧೆಯಿಂದ ಕೃಷಿ ಮಾಡಿದರೆ ಲಾಭ ಕಂಡುಕೊಳ್ಳಬಹುದು ಎಂದರು. ಕೋಕೋ ಬೆಳೆಯ ಹಲವಾರು ಉಪಯೋಗಗಳನ್ನು ವಿವರಿಸಿದರು. ವಿಟ್ಲದ ತಾಂತ್ರಿಕ ಅಧಿಕಾರಿ ಕೇಶವ ಭಟ್ಟರು, ಕೋಕೋ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ತಾಂತ್ರಿಕ ಪುರವಣೆ ಬಿಡುಗಡೆಗೊಳಿಸಿದರು. ಡಾ. ರವಿರಾಜ ಶೆಟ್ಟಿ, ಜಿ. ಸಹಾಯಕ ಪ್ರಾಧ್ಯಾಪಕರು, ಮುಖ್ಯಸ್ಥರು, ಕಾರ್ಯಕ್ರಮದಲ್ಲಿ 90ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement