ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಹಂತ ಶ್ರೀ ನಿಧನಕ್ಕೆ ಸಂತಾಪ

Lingaraj Badiger
Updated On : 5 Feb 2013, 10:48 am

ಕಡೂರು: ಶ್ರೀ ಮಹಂತ ಸ್ವಾಮೀಜಿಗಳ ನಿಧನಕ್ಕೆ ಕಡೂರು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಲ್ಲ ಮಠ ಮಾನ್ಯಗಳೊಂದಿಗೆ ಉತ್ತಮ ಸೌಹಾರ್ಧ ಸಂಬಂಧ ಹೊಂದಿದ್ದ ಶ್ರೀಗಳ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಶ್ರೀಗಳು ಪಂಚಮಸಾಲಿ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿ ಇತ್ತೀಚೆಗಷ್ಟೇ ಪಂಮಸಾಲಿ ಮಠವನ್ನು ಸ್ಥಾಪಿಸಿದ್ದ ಅವರ ದಿಢೀರ್ ನಿಧನದಿಂದಾಗಿ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವುಂಟಾಗಿದ್ದು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದರು.
ಪದಾಧಿಕಾರಿಗಳ ಆಯ್ಕೆ
ಮೂಡಿಗೆರೆ: ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಉದಯ್‌ಶಂಕರ್, ಉಪಾಧ್ಯಕ್ಷರಾಗಿ ಉಮಾಶಂಕರ್, ಕಾರ್ಯದರ್ಶಿಯಾಗಿ ರಫೀಕ್, ಖಜಾಂಚಿ ಸಂತೋಷ್‌ರನ್ನು ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement