ರು. 15 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ
ಚಿಕ್ಕಮಗಳೂರು: ಇಲ್ಲಿನ ಉಪ್ಪಳ್ಳಿ ಹರಿಜನ ಕಾಲೋನಿ ರಸ್ತೆಗಳನ್ನು 15 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ ಎಂದು ಬಿಜೆಪಿ ನಗರಾಧ್ಯಕ್ಷ ಕೋಟೆ ರಂಗನಾಥ್ ಹೇಳಿದ್ದಾರೆ.
ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿರುವ 3 ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ 30 ಲಕ್ಷ ರು. ವೆಚ್ಚದಲ್ಲಿ ಮಸೀದಿ ರಸ್ತೆ, ಶಾಲೆ ಮುಂಭಾಗದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದ್ದು, ಕೆಲವು ಕಚ್ಚಾ ರಸ್ತೆಗಳನ್ನು ಜೆಲ್ಲಿ ಹಾಕಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
1.5 ಕೋಟಿ ಅನುದಾನ: ನಗರಸಭೆ ಸದಸ್ಯ ಸಗಾಯಿದಾಸ್ ಮಾತನಾಡಿ, ರಸ್ತೆ, ಚರಂಡಿ, ಪಾರ್ಕ್, ಸಮುದಾಯ ಭವನ ನಿರ್ಮಾಣ ಸೇರಿದಂತೆ 1.5 ಕೋಟಿ ರು. ಅನುದಾನದಲ್ಲಿ ವಾರ್ಡ್ ಅಭಿವೃದ್ಧಿ ಪಡಿಸಲಾಗಿದ್ದು ಇದಕ್ಕೆ ಸಚಿವರ, ಪಕ್ಷ ಮತ್ತು ಜಾತ್ಯತೀತ ನಿಲುವು ಕಾರಣ ಎಂದರು.
ಸಿಡಿಎ ಅಧ್ಯಕ್ಷ ಬಿ. ರಾಜಪ್ಪ, ಪೌರಾಯುಕ್ತ ಪ್ರಭಾಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಜಿಲ್ಲಾ ಅಲ್ಪಸಂಖ್ಯಾತ ಬಿಜೆಪಿ ಮೋರ್ಚಾ ಅಧ್ಯಕ್ಷ ಮಹಮದ್ ಅನ್ವರ್, ಸೀತಾರಾಂ ಭರಣ್ಯ, ಎ್‌ಡಿಎಂಸಿ ಅಧ್ಯಕ್ಷ ಗಣೇಶ್, ಆಶ್ರಯ ಸಮಿತಿ ಸದಸ್ಯ ಮನೋಹರ್, ದಾವೂದ್, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.