ಮಾಹಿತಿ ಕಾರ್ಯಕ್ರಮ
ನರಸಿಂಹರಾಜಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಿದೆ. ಗ್ರಾಮಸಭೆಗಳಲ್ಲಿ ಈ ಯೋಜನೆ ತಯಾರಿಸುವಾಗ ಮಹಿಳೆಯರು ಹೆಚ್ಚಾಗಿ ಭಾಗವಹಿಸಿ ಸಲಹೆ ನೀಡಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಜೆ.ಜಿ. ನಾಗರಾಜ್ ಕರೆ ನೀಡಿದರು.
ಅವರು ಸೋಮವಾರ ಸಾಮರ್ಥ್ಯಸೌಧದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ನಡೆದ ಉಪಗ್ರಹ ಆಧಾರಿತ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಜಾತಾ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕುಬೇರ ಮಾತನಾಡಿ, ರಾಷ್ಟೀಯ ಗ್ರಾಮೀಣ ಖಾತರಿ ಯೋಜನೆಯ ಮುಖ್ಯಾಂಶಗಳು, ಕೂಲಿಕಾರರ ಆಯವ್ಯಯ ಮತ್ತು ಯೋಜನೆಯ ಅಭಿವೃದ್ಧಿ ಮುನ್ನೋಟ ತಯಾರಿ ಮುಂತಾದ ವಿಚಾರಗಳನ್ನು ಉಪಗ್ರಹ ಆಧಾರಿತ ತರಬೇತಿ ಕಾರ್ಯಾಗಾರದಲ್ಲಿ ಮಹಿಳೆಯರಿಗೆ ತಿಳಿಸಿಕೊಡಲಾಗುವುದು ಎಂದರು. ಮೀನಾಕ್ಷಮ್ಮ ಸ್ವಾಗತಿಸಿ, ಗುರುಶಾಂತಪ್ಪ ನಿರೂಪಿಸಿದರು.