ರಾಜ್ಯದಲ್ಲಿ ಬಿಎಸ್ಆರ್ ಪಕ್ಷ ಅಧಿಕಾರಕ್ಕೆ: ವಿಶ್ವಾಸ
ತರೀಕೆರೆ: ರಾಜ್ಯದಲ್ಲಿ ಬಿಎಸ್ಆರ್ ಪಕ್ಷ ಖಂಡಿತಾ ಅಧಿಕಾರಕ್ಕೆ ಬರುತ್ತದೆ ಎಂದು ಬಿಎಸ್ಆರ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಭರತ್ಕುಮಾರ್ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಡನೆ ಮಾತನಾಡಿದರು.
ಶ್ರೀರಾಮುಲು ಪಕ್ಷ ಎಲ್ಲ ಕಡೆ ಗೆಲ್ಲುತ್ತದೆ. ಶ್ರೀರಾಮುಲು ಪಕ್ಷ ಅಧಿಕಾರ ಗಳಿಸುತ್ತದೆ. ಜನಾರ್ಧನ ರೆಡ್ಡಿ ಮೇಲೆ ಇಲ್ಲದ ಆಪಾದನೆ ಹೊರಿಸಿದ್ದಾರೆ. ರೆಡ್ಡಿ ಆಪಾದನೆ ಮುಕ್ತರಾಗಿ ಜನರ ಮುಂದೆ ಬರುತ್ತಾರೆ. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ಬಿಜೆಪಿ ಧರ್ಮದ ಹೆಸರಿಲ್ಲಿ ಅಧರ್ಮ ಮಾಡುತ್ತಿದೆ. ಒಂದು ಕಡೆಯೂ ಗುಣಮಟ್ಟದ ಕಾಮಗಾರಿ ಕಾರ್ಯ ಆಗಿಲ್ಲ ಎಂದು ಅರೋಪಿಸಿದರು.
ತೆರಿಗೆ ಲೂಟಿ: ರಾಜ್ಯದ ತೆರಿಗೆ ಹಣವನ್ನು ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ಸ್ವ ಅಭಿವೃದ್ಧಿ ಆಗಿದೆ. ಬಡವರು ಬಡವಾರಾಗಿಯೇ ಇದ್ದಾರೆ. ಬಿಜೆಪಿ ಸರ್ಕಾರ ದುರಂತದ ಸರ್ಕಾರ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ವಾಜಿದ್, ಟಿ.ವಿ. ವಿಜಯ್ ಉಪಸ್ಥಿತರಿದರು.