ಕೊಲೆ ಪ್ರಯತ್ನ: ಏಳು ಆರೋಪಿಗಳಿಗೆ 3 ವರ್ಷ ಜೈಲು
ಚಿಕ್ಕಮಗಳೂರು: ಕೊಲೆ ಮಾಡಲು ಪ್ರಯತ್ನಿಸಿದ ಏಳು ಮಂದಿ ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕೊಪ್ಪ ಪಟ್ಟಣದ ಸಂತೋಷ, ಮಹೇಶ್ ಕುಮಾರ್, ಮಂಜುನಾಥ, ಸತೀಶ್ ಪೂಜಾರಿ, ಅರ್ಜುನ್, ಸುನಿಲ್ ಅಲಿಯಾಸ್ ಶಶಿಧರ್ ಹಾಗೂ ಭಾಸ್ಕರ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
2011 ನವೆಂಬರ್ 25 ರಂದು ರಾತ್ರಿ ಎಂಬುವರು ಆರೋಪಿಗಳು ವಾಹನದಲ್ಲಿ ಬರುತ್ತಿದ್ದ ಮಹ್ಮದ್ ಅಸಿಫ್ ಎಂಬುವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿದಿಸಿ ಕಲ್ಲು, ದೊಣ್ಣೆ ಹಾಗೂ ಕತ್ತಿಯಿಂದ ಹೊಡೆದು ಗಾಯ ಉಂಟು ಮಾಡಿದಲ್ಲದೆ, ಅವರ ಬಳಿಯಿದ್ದ ಒಂದು ಸಾವಿರ ರುಪಾಯಿಯನ್ನು ಬಲವಂತವಾಗಿ ಕಿತ್ತುಕೊಂಡು ಕೊಲೆ ಮಾಡಲು ಪ್ರಯತ್ನಿಸಿದ್ದರು.
ಹಿನ್ನಲೆಯಲ್ಲಿ ಕೊಪ್ಪ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎ. ಪಾಟೀಲ್ ಅವರು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಎಲ್ಲಾ ಏಳು ಮಂದಿ ಆರೋಪಿತರಿಗೂ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1,75,000 ದಂಡ ವಿಧಿಸಿದ್ದು, ಈ ಹಣದಲ್ಲಿ ಮಹ್ಮದ್ ಅಸಿಫ್ ಅವರಿಗೆ 1 ಲಕ್ಷ ಪರಿಹಾರ, ಉಳಿದ 75 ಸಾವಿರವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವಿ.ಆರ್. ಉಪಾಧ್ಯೆ ವಾದ ಮಂಡಿಸಿದರು.