ಪತ್ನಿ ಶೀಲ ಶಂಕಿಸಿ ಕತ್ತಿಯಿಂದ ಹಲ್ಲೆ
ಮೂಡಿಗೆರೆ: ಪತ್ನಿಯ ಶೀಲ ಶಂಕಿಸಿದ ಪತಿ ಕುಡಿದು ಬಂದು ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಗೋಣಿಬೀಡಿನ ಜಿ. ಹೊಸಳ್ಳಿಯಲ್ಲಿ ನಡೆದಿದೆ.
ಇಲ್ಲಿನ ವಾಸಿಯಾದ ನಂಜುಂಡ ತನ್ನ ಪತ್ನಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಫೆ.6 ರ ಬುಧವಾರ ತಡರಾತ್ರಿ ಕುಡಿದು ಹೆಂಡತಿ ದೇವಕಿ (45) ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅಡ್ಡ ಬಂದ ದೇವಕಿಯ ತಾಯಿ ಪುಟ್ಟಮ್ಮ (75) ಸೇರಿದಂತೆ ಇಬ್ಬರಿಗೂ ಕತ್ತಿಯಿಂದ ಕುತ್ತಿಗೆಯನ್ನು ಕಡಿಯಲು ಯತ್ನಿಸಿದ್ದಾನೆ. ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡು ರಕ್ತ ಶ್ರಾವದಲ್ಲಿ ಬಿದ್ದಾಗ ಗಾಬರಿಗೊಂಡ ನಂಜುಂಡ ಸ್ಥಳದಿಂದ ಪರಾರಿಯಾಗಿದ್ದಾನೆ.
ತದೇವಕಿಯ ಸಂಬಂಧಿ ಬಸವೇಗೌಡ ಗೋಣೀಬೀಡು ಠಾಣೆಗೆ ದೂರು ನೀಡಿದ್ದು, ಆರೋಪಿ ನಂಜುಂಡನಿಗೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಹಿಳೆ ಆತ್ಮಹತ್ಯೆ
ಕೊಪ್ಪ: ಇಲ್ಲಿನ ಆರೂರು ಗ್ರಾಮದ ಮನೆಯೊಂದರಲ್ಲಿ ಮಹಿಳೆಯೊಬ್ಬಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತಪಟ್ಟ ಮಹಿಳೆ ಪದ್ಮಿನಿ (38) ಎಂಬುವರು ಕಳೆದ ಜ.29ರಂದು ಕಾಣೆಯಾಗಿದ್ದಾರೆ ಎಂದು ಕೊಪ್ಪ ಠಾಣೆಯಲ್ಲಿ ಪದ್ಮಿನಿಯವರ ತಾಯಿ ದೂರು ದಾಖಲು ಮಾಡಿದ್ದು ಬುಧವಾರ ಪದ್ಮಿನಿಯವರ ಹಳೆ ವಾಸದ ಮನೆಯಲ್ಲಿ ಕೊಳೆತ ವಾಸನೆ ಬರುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಮನೆಯ ಬಾಗಿಲು ಒಡೆದ ಸಂದರ್ಭದಲ್ಲಿ ಪದ್ಮಿನಿಯವರ ಕೊಳೆತ ಮೃತ ದೇಹ ಕಂಡಿದ್ದು ಪಕ್ಕದಲ್ಲೇ ಇದ್ದ ವಿಷದ ಬಾಟಲು ಇದದ್ದರಿಂದ ವಿಷಾಸೇವನೆ ಮಾಡಿ ಆತ್ಮಹತ್ಯಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪತಿ ಪದ್ಮನಾಭ ಕೊಪ್ಪ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.