ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೂಡಿಗೆರೆ: ಕಳಸ ಸಮೀಪದ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿಶೇಷ ಅನುದಾನದ ಅಡಿಯಲ್ಲಿ ಗ್ರಾಮದ ಕೆಲವೆಡೆ ವಿವಿಧ ಕಾಮಗಾರಿಗಳಿಗೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರ ಸ್ವಾಮಿ ಚಾಲನೆ ನೀಡಿದರು.
ಗ್ರಾಮದ ಸಂಪಾನೆ ಸೇತುವೆಗೆ 30 ಲಕ್ಷ, ಉಳ್ಳುರು ಕೋರೆ ರಸ್ತೆ ಡಾಮಾರಿಕರಣಕ್ಕೆ 20 ಲಕ್ಷ, ಮುಳ್ಳೋಡಿ ರಸ್ತೆ ಡಾಮಾರೀಕರಣಕ್ಕೆ 40 ಲಕ್ಷ, 30 ಲಕ್ಷ ವೆಚ್ಚದಲ್ಲಿ ಕಡುಮನೆ ಕೊಂಡ ಸೇತುವೆಯ ಕಾಮಗಾರಿ, ಜೋಗಿಕುಂಬ್ರಿಯಲ್ಲಿ ಸೇತುವೆ ನಿರ್ಮಾಣಕ್ಕೆ 35 ಲಕ್ಷ, ನೆಲ್ಲಿ ಬೀಡುವಿನ ಕತ್ತಡ್ಕ ರಸ್ತೆ ಕಾಂಕ್ರೀಟೀಕರಣ 20 ಲಕ್ಷ, ಬಲಿಗೆ ಬಸದಿ ಬಳಿ ನೀರಡ್ಲುಗೆ ಸೇತುವೆ ನಿರ್ಮಾಣ 13.50 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿ ನಂತರ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಒಂದು ಸಮಯದಲ್ಲಿ ಮುಳ್ಳೋಡಿಯಂತ ಪ್ರದೇಶಗಳ ರಸ್ತೆಯ ಪರಿಸ್ಥಿತಿ ನೋಡಿ ಈ ಭಾಗಕ್ಕೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದರು. ಆದರೆ, ಬಿಜೆಪಿ ಉತ್ತಮ ಆಡಳಿತದಿಂದ ಇಂತಹ ಹವವಾರು ಪ್ರದೇಶಗಳು ಅಭಿವೃದ್ಧಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಸಂಸೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆರಿಯಸ್ವಾಮಿ, ಬಿಜೆಪಿ ಹೋಬಳಿ ಕಾರ್ಯದರ್ಶಿ ಶ್ರೇಯಂಶ ಜೈನ್, ಜಗದೀಶ್ ಮುಂತಾದವರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.