ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಡಿಯುವ ನೀರಿನ ಯೋಜನೆ ತ್ವರಿತಕ್ಕೆ ಜಿಪಂ ಅಧ್ಯಕ್ಷೆ ಸೂಚನೆ

Parashurama
Updated On : 9 Feb 2013, 10:44 am

ಕೊಪ್ಪ: ಕುಡಿಯುವ ನೀರಿನ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ದೂರುಗಳು ಬರುತ್ತಿದ್ದು, ತಾಲೂಕು ವಿಭಾಗದ ಜಿಪಂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಮುಗಿಸಬೇಕೆಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಪಂ ಎಂಜಿನಿಯರ್‌ಗೆ ಸೂಚಿಸಿದರು.
ಶುಕ್ರವಾರ ತಾಪಂ ಸಭಾಂಗಣದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆಗುಂದಾ, ಕಸಬಾ, ಹರಿಹರಪುರ ಹೋಬಳಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರುವ ವರದಿಗಳು ಬರುತ್ತಿದೆ. ಅದಕ್ಕೆ ಪೂರಕವಾಗಿ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಬಾವಿಗಳ ನಿರ್ಮಾಣ: ಮಾಹಿತಿ ನೀಡಿದ ತಾಲೂಕು ವಿಭಾಗದ ಜಿಪಂ ಇಲಾಖೆ ಎಂಜಿನಿಯರ್ ರಾಜೇಶ್, ಈಗಾಲೇ ಕುಡಿಯುವ ನೀರಿನ ಬಾವಿಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು 20 ಕಾಮಗಾರಿಗಳ ಪೈಕಿ 10 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಎರಡು ತಿಂಗಳೊಳಗೆ ಬಹುತೇಕ ಕೆಲಸಗಳನ್ನು ಪೂರ್ಣಗೋಳಿಸುವುದಾಗಿ ತಿಳಿಸಿದರು.
ಗೋದಾಮುಗಳನ್ನು ಗುರುತಿಸಿ: ಜಿಪಂ ಸದಸ್ಯ ಶಿವಣ್ಣ ಮಾತನಾಡಿ, ಕೃಷಿ ಇಲಾಖೆಯಿಂದ ಬತ್ತ ಖರೀದಿ ಕೇಂದ್ರ ತೆರೆಯುವ ಮುನ್ನಾ ಗೋದಾಮುಗಳನ್ನು ಗುರುತಿಸುವ ಕೆಲಸ ಮಾಡಿಕೊಳ್ಳಿ. ಕೊಪ್ಪ ತಾಲೂಕಿನ ಭವನಕೋಟೆ, ಕೆಸವೆ, ಮರಿತೋಟ್ಲು, ಅಗಳಗಂಡಿ, ತುಳುವಿನಕೊಪ್ಪ, ಭಂಡಿಗಡಿ, ನರಸೀಪುರ, ಗುಡ್ಡೇತೋಟ ಗ್ರಾಪಂಗಳಿಗೆ ಸುವರ್ಣಗ್ರಾಮ ಯೋಜನೆ ಮಂಜೂರಾಗಿದ್ದು ಈವರೆಗೆ ಭೂ ಸೇನಾ ನಿಗಮದ ನಿರ್ಲಕ್ಷ್ಯದಿಂದ ಕಾರ್ಯಯೋಜನೆಯ ಪಟ್ಟಿ ರೂಪುಗೊಂಡಿಲ್ಲದೇ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ನೆನಗುದಿಗೆ ಬಿದ್ದಿದೆ ಎಂದು ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್ ದೂರಿದರು.
ಜಿಲ್ಲಾ ಕಾರ್ಯನಿರ್ವಹಕಾಧಿಕಾರಿ ಶಿವಶಂಕರ ಮಾತನಾಡಿ, ಭೂ ಸೇನಾ ನಿಗಮದ ಎಂಜಿನಿಯರ್‌ಗೆ ತ್ವರಿತಗತಿಯಲ್ಲಿ ಆಕ್ಷನ್ ಪ್ಲಾನ್ ಸಿದ್ಧಪಡಿಸಿಸುವಂತೆ ಸೂಚನೆ ನೀಡಿದರು.
ಜಿಪಂ ಉಪಾಧ್ಯಕ್ಷೆ ಮಾಲಿನಿ ಬಾಯಿ, ಸದಸ್ಯರಾದ ಅದಿಲ್, ಸುಚಿತಾ ನರೇಂದ್ರ, ಅನ್ನಪೂರ್ಣ, ನ.ರಾ.ಪುರ ತಾಪಂ ಅಧ್ಯಕ್ಷ ಜಿ.ಜೆ. ನಾಗರಾಜ್, ಜಿಲ್ಲಾ ಬಿಸಿಎಂ ಜಿಲ್ಲಾಧಿಕಾರಿ ಡಾ.ಜಗದೀಶ್, ಜಿಪಂ ಸಿಇಒ ಶಿವಶಂಕರ್, ತಹಸೀಲ್ದಾರ್ ಲಿಂಗಪ್ಪಗೌಡ, ಉಪಾಧ್ಯಕ್ಷ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments