ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಸಮರ್ಪಕ ವಿದ್ಯುತ್ ಖಂಡಿಸಿ ಪ್ರತಿಭಟನೆ

Parashurama
Updated On : 10 Feb 2013, 10:29 am

ನರಸಿಂಹರಾಜಪುರ: ಬಿಜೆಪಿ ಸರ್ಕಾರ ಅಸಮರ್ಪಕ ವಿದ್ಯುತ್ ನೀಡುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಹಾಗೂ ಮುತ್ತಿನಕೊಪ್ಪ ಕಾಂಗ್ರೆಸ್ ಸಮಿತಿಯಿಂದ ಮುತ್ತಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದ ಎದರು ಪ್ರತಿಭಟನೆ ನಡೆಸಲಾಯಿತು.
ಮುತ್ತಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದ ಎದರಿನ ಮುಖ್ಯ ರಸ್ತೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಬೇಕಾಯಿತು. ನಂತರ ಮೆಸ್ಕಾಂ ಬಾಳೆಹೊನ್ನೂರು ಸಹಾಯಕ ಎಂಜಿನಿಯರ್ ವಿಜಯಕುಮಾರ್ ಸ್ಥಳಕ್ಕೆ ಬಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ವಿದ್ಯುತ್ ಸಮಸ್ಯೆ ಬಗ್ಗೆ ವಿವರಿಸಿ, ಕಳೆದ 3 ವರ್ಷದಿಂದ ಮುತ್ತಿನಕೊಪ್ಪದಲ್ಲಿ ಲೈನ್‌ಮೆನ್ ಇಲ್ಲದ ಬಗ್ಗೆ ಅಹವಾಲನ್ನು ನೀಡಿದರು. ಮೆಸ್ಕಾಂ ಎಂಜಿನಿಯರ್ ಭರವಸೆ ನೀಡಿ, ವಾರದಲ್ಲಿ ಮುತ್ತಿನಕೊಪ್ಪಕ್ಕೆ ಲೈನ್ ಮೆನ್ ನೇಮಿಸಲು ಕ್ರಮ, ಸಂಜೆ 6 ರಿಂದ 10 ಗಂಟೆಯವರೆಗೆ ವಿದ್ಯುತ್‌ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಯೋಗೀಶ್, ಡಾ. ಕೆ.ಪಿ. ಅಂಶುಮಂತ್, ವೆಂಕಟೇಶ್, ಸುಬ್ರಮಣ್ಯ, ಶೇವಿಯಾರ್, ಮೀನಾಕ್ಷಿ ಕಾಂತರಾಜ್, ಗಂಗಾಧರ್, ನಹೀಂ, ಕೆ.ಎ. ಅಬೂಬಕರ್, ಎಲ್ದೋಸ್, ಸಫೀರಾ ಅಹಮ್ಮದ್, ಖಲೀಲ್ ಸಾಬ್, ಜಗತ್ಪಾಲ್ ಶೆಟ್ಟಿ, ಪ್ರಸನ್ನ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments