ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚಂದ್ರಶೇಖರ ಭಾರತಿ ಜಯಂತ್ಯುತ್ಸವ

Parashurama
Updated On : 10 Feb 2013, 10:36 am

ಶೃಂಗೇರಿ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲಾ ಆವರಣದಲ್ಲಿ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಜಯಂತ್ಯುತ್ಸವ ನಡೆಯಿತು. ಸಂಸ್ಕೃತ ಪ್ರಾದ್ಯಾಪಕ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮರ ಜೀವನದ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರಿಂದ ಯಶಸ್ಸು ಕಾಣಲು ಸಾಧ್ಯ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ, ಶೋಭಾ ಅನಂತಯ್ಯ ಇದ್ದರು.
ಎಂ.ಸಿ. ಹಳ್ಳಿ ಶಾಲೆಗೆ ಪರಿಕರಗಳ ಹಸ್ತಾಂತರ
ತರೀಕೆರೆ: ಸಮೀಪದ ಎಂ.ಸಿ. ಹಳ್ಳಿ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಬೆಂಗಳೂರು, ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್‌ನಿಂದ ಶಾಲಾ ಪರಿಕರಗಳ ಹಸ್ತಾಂತರ ಸಮಾರಂಭ ಏರ್ಪಡಿಸಲಾಗಿತ್ತು.  ಸಮಾರಂಭಕ್ಕೆ ಮುನ್ನ ಎಂಸಿಎಫ್‌ಲಿ ಡೆಪ್ಯೂಟಿ ಜನರಲ್ ಮೇನೇಜರ್  ಜಿ. ಗುರುನಾಥ್ ಮಾತನಾಡಿ, ಎಂಸಿಎಫ್ ನಾಲ್ಕು ದಶಕಗಳಿಂದ ರಾಜ್ಯದಲ್ಲಿ ರೈತರಿಗಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದೀಗ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರೈತರ ಮಕ್ಕಳಿಗಾಗಿ ಅಕ್ಷರ ಮಿತ್ರ ಯೋಜನೆಯಡಿ ಶಾಲಾ ಪರಿಕರಗಳಾದ ಅಲ್‌ಮೇರು, ಡೆಸ್ಕ್‌ಗಳು, ಗ್ರೀನ್ ಬೋರ್ಡ್‌ಗಳು, ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ತಾಪಂ ಸದಸ್ಯೆ ಶಾರದ ವೇಲುಮುರುಗನ್, ಬಿ.ಎಂ. ಗರುಮೂರ್ತಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಿ. ದೇವೇಂದ್ರ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರು, ಎಚ್.ಟಿ. ಮಂಜುನಾಥ್, ಬಿಇಒ ಸಿ.ಆರ್. ಪರಮೇಶ್ವರಪ್ಪ, ಎಂ.ಪಿ.ನಿರಂಜನಕುಮಾರ್, ಶಿಕ್ಷಕರು ಉಪಸ್ಥಿತರಿದ್ದರು.
ರೈತರ ಪರ ಬಜೆಟ್: ದೇವಾನಂದ್
ತರೀಕೆರೆ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿರುವ ಒಂದು ಲಕ್ಷ 17 ಸಾವಿರ ಕೋಟಿ ರಾಜ್ಯ ಬಜೆಟ್ ರೈತರ ಪರವಾಗಿದೆ ಎಂದು ಬಿಜೆಪಿ ಮುಖಂಡ, ಮ್ಯಾಮ್‌ಕೋಸ್ ನಿರ್ದೇಶಕ ಆರ್. ದೇವಾನಂದ್ ತಿಳಿಸಿದರು. ಆರ್‌ಟಿಒ ಕಚೇರಿ- ತರೀಕೆರೆ ತಾಲೂಕಿಗೆ ಆರ್.ಟಿ.ಒ.ಕಚೇರಿ ಮತ್ತು ಕಡೂರು ತಾಲೂಕಿಗೆ ಬಯಲು ಬಂಧೀಖಾನೆ,  ಹರಿಹರಪುರ ಮಠಕ್ಕೆ 1 ಕೋಟಿ ರು. ನೀಡಿರುವುದು  ಜಿಲ್ಲೆಯ ಜನತೆಗೆ ಅಪಾರ ಹರ್ಷ ತಂದಿದೆ. ಆಯವ್ಯಯ ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.   ತಾಲೂಕು ಬಿಜೆಪಿ ಅಧ್ಯಕ್ಷ ಎ.ಸಿ. ಚಂದ್ರಪ್ಪ,ಬಜೆಟ್ ಅಭಿವೃದ್ಧಿಪರವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments