ರಸ್ತೆ ಅಭಿವೃದ್ಧಿ
ತರೀಕೆರೆ: ತಾಲೂಕಿಗೆ ನಮ್ಮ ಗ್ರಾಮ ನಮ್ಮ ರಸ್ತೆ, ಮುಖ್ಯಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆಯಲ್ಲಿ ರು. 12 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸುರೇಶ್ ತಿಳಿಸಿದ್ದಾರೆ. ಮಿರಳೇನಹಳ್ಳಿಯಲ್ಲಿ 3.20 ಕಿ.ಮೀ, ಹಿರೇಕಾತೂರಿನಲ್ಲಿ 1.60 ಕಿ.ಮೀ, ದೊಡ್ಡಕುಂದೂರಿನಲ್ಲಿ 4 ಕಿ.ಮಿ, ವಿಠಲಾಪುರ-ಕುಂಟಿನಮಡು-ನಾಗೇನಹಳ್ಳಿ 4.50 ಕಿ.ಮಿ, ಬೂತನಹಳ್ಳಿಯಿಂದ ಸಾಣೆಹಳ್ಳಿ-ಕಬ್ಬಿನಕೆರೆ 1.50 ಕಿ.ಮೀ, ಗರಗದಹಳ್ಳಿಯಿಂದ ಬೂತನಹಳ್ಳಿಗೆ 2 ಕಿ.ಮೀ, ಮಲ್ಲಿಕೊಪ್ಪ 1 ಕಿ.ಮೀ, ಶಿವಪುರದಿಂದ ದೊಡ್ಡ ಬೋಕೀಕೆರೆ 2 60 ಕಿ.ಮೀ, ನಾರಾಣಾಪುರದಿಂದ ಕಣಬಗಟ್ಟೆ 3.10 ಕಿ.ಮೀ, ಮೆಣಸಿನಕಾಯಿ ಹೊಸಹಳ್ಳಿಯಿಂದ ಬನಕನಕಟ್ಟೆ 3.30 ಕಿ.ಮೀ, ಯೆರೆಹೊಸಹಳ್ಳಿಯಿಂದ ಗೆಜ್ಜೆಗೊಂಡನಹಳ್ಳಿ 3.20 ಕೀ.ಮೀ ಹೀಗೆ 30 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ರು. 12 ಕೋಟಿ ಮಂಜೂರಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.