ಸಮಾಜಕ್ಕಾಗಿ ದುಡಿದವರನ್ನು ಮರೆಯುವುದಿಲ್ಲ: ರೇಖಾ
ಚಿಕ್ಕಮಗಳೂರು: ಸಮಷ್ಟಿ ಹಿತಕ್ಕಾಗಿ ಶ್ರಮಿಸಿದವರನ್ನು ಸಮಾಜ ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ನಾದಚೈತನ್ಯ ಸಾಂಸ್ಕೃತಿಕ ಕಲಾವೇದಿಕೆ ಸ್ಥಾಪಕಿ ರೇಖಾ ಪ್ರೇಮ್ಕುಮಾರ್ ಹೇಳಿದ್ದಾರೆ.
ನಗರದ ಮೌಂಟ್ ವ್ಯೂ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಫ್ ಸೈನ್ಸ್ನಲ್ಲಿ ಶನಿವಾರ ನಡೆದ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾಹಬ್ಬ ಇಂಟೆಗ್ರಾ- 2013 ಸಮಾರಂಭದ ಸಮಾರೋಪ ಭಾಷಣ ಮಾಡಿದರು.
ಸಮಾಜಹಿತಕ್ಕಾಗಿ ದುಡಿದ ಸಾಧಕರನ್ನು ಸಮಾಜ ಗೌರವಿಸುತ್ತದೆ. ಪಠ್ಯದಲ್ಲೂ ಸ್ಥಾನ ನೀಡಿ ಬೆಳೆಯುವ ಪೀಳಿಗೆಗೆ ಅವರ ನೆನಪು ಮಾಡಿಕೊಡುವ ಕೆಲಸಮಾಡುತ್ತದೆ. ವಿದ್ಯಾರ್ಥಿ ಯುವಜನರು ಕ್ಷುಲ್ಲಕ ವಿಚಾರಗಳ ಹಿಂದೆ ಬೀಳದೆ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಮೂಲಕ ಬಹುಕಾಲ ಬಾಳಬೇಕೆಂದರು.
ಸಂಸ್ಥೆ ಕಾರ್ಯದರ್ಶಿ ಹಬೀಬಾ ಎನ್. ಪಾಷ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯ ಪ್ರಜೆಗಳು ಭಾರತದ ಇಂದಿನ ಅವಶ್ಯಕತೆ. ಸಮಯವ್ಯರ್ಥ ಮಾಡದೆ ಹೆಚ್ಚು ಪ್ರಾಯೋಗಿಕವಾಗಿ ಆಲೋಚಿಸಿ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದರು.
ಪ್ರಾಂಶುಪಾಲೆ ಟಿ.ಎಂ. ದೇವಿಕಾ ವಾರ್ಷಿಕ ವರದಿ ಮಂಡಿಸಿದರು. ಪಿ.ಯು. ಕಾಲೇಜು ಪ್ರಾಂಶುಪಾಲೆ ತಸ್ನೀಮ್ ಫಾತೀಮಾ, ಸಾಂಸ್ಕೃತಿಕ ಕಾರ್ಯದರ್ಶಿ ಪಿ. ಪರಮೇಶ್ವರಿ, ಕ್ರೀಡಾ ಕಾರ್ಯದರ್ಶಿ ಷಹಬಾದ್, ಆಡಳಿತಾಧಿಕಾರಿ ಭದ್ರೇಗೌಡ, ಹಿರಿಯ ಉಪನ್ಯಾಸ ಇಮ್ತಿಯಾಜ್ ಶಾ ಅಲಿಬೇಗ್ ವೇದಿಕೆಯಲ್ಲಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.