ಹುಲ್ಲು ಬಣವೆಗೆ ಆಕಸ್ಮಿಕ ಬೆಂಕಿ: ನಷ್ಟ
ತರೀಕೆರೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಳೆಯೂರು ಗೇಟ್‌ನಲ್ಲಿ ಶನಿವಾರ ಸಂಜೆ, ಆಕಸ್ಮಿಕ ಬೆಂಕಿ ತಗುಲಿ ತನೆಸಹಿತ ರಾಗಿ, ಹುಲ್ಲಿನ ರಾಶಿ, ಬತ್ತದ ಹುಲ್ಲಿನ ಬಣವೆ ಜೋಳದ ಸೊಪ್ಪೆ ಮತ್ತು ಮೆಕ್ಕೆಜೋಳದ ಹೊಟ್ಟಿನ ರಾಶಿಗೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾಗಿದೆ. ಈ ಹುಲ್ಲಿನ ಬಣವೆಗಳು ಹಳೆಯೂರು ಗೇಟ್‌ನ ಶಾಂತಯ್ಯ ಎನ್ನುವವರಿಗೆ ಸೇರಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದರು.
ನೇಣಿಗೆ ಶರಣಾದ ಯುವಕ
ಮೂಡಿಗೆರೆ: ಪಟ್ಟಣದ ಬಾರ್‌ವೊಂದರಲ್ಲಿ ಕೆಲಸ ಕೇಳಿ ಬಂದ ಯುವಕನೊಬ್ಬ ಬಾರ್ ಮಾಲೀಕರು ತಂಗಲು ನೀಡಿದ್ದ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಸಂತ (23) ಮೃತ ವ್ಯಕ್ತಿ. ಪಟ್ಟಣದ ಸುದರ್ಶನ್ ಬಾರ್‌ನಲ್ಲಿ ಫೆ.8ರ ಶುಕ್ರವಾರ ತಾನು ಅರಸೀಕೆರೆಯಿಂದ ಬಂದಿದ್ದು, ಕೆಲಸ ಕೊಡಿ ಎಂದು ಮಾಲೀಕರಲ್ಲಿ ವಿನಂತಿಸಿದ್ದಾನೆ. ಆಗ ಬಾರಿನ ಮಾಲೀಕರು ನಾಳೆ ಬೆಳಗ್ಗೆಯಿಂದ ಕೆಲಸಕ್ಕೆ ಬಾ ಎಂದು ಹೇಳಿ ರೂಮಿನಲ್ಲಿ ತಂಗುವಂತೆ ತಿಳಿಸಿದ್ದರೆನ್ನಲಾಗಿದೆ.
ಫೆ.9ರ ಬೆಳಗ್ಗೆ 10 ಗಂಟೆಯಾದರೂ ವಸಂತ ಬಾರದೇ ಇದ್ದುದ್ದನ್ನು ನೋಡಿ ಕೆಲಸಗಾರರಿಗೆ ರೂಮಿನತ್ತ ನೋಡಿ ಬರಲು ತಿಳಿಸಿದಾಗ ವಸಂತ ಆತ್ಮಹತೆ ಮಾಡಿ ಕೊಂಡಿದ್ದ. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವ ಪರೀಶಿಲಿಸಿ, ಶವ ಪರೀಕ್ಷೆಗೆ ಮೃತ ದೇಹವನ್ನು ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾಫಿ ಬೀಜ ಕಳ್ಳನ ಬಂಧನ
ಮೂಡಿಗೆರೆ: ನಡುರಾತ್ರಿಯಲ್ಲಿ ಕಣದಲ್ಲಿ ಹರಡಿದ್ದ ಕಾಫಿ ಬೀಜಗಳನ್ನು ಕಳ್ಳನೊಬ್ಬ ಮೂಟೆಯಲ್ಲಿ ತುಂಬಿಸಿಕೊಂಡು ತನ್ನ ಬೈಕಿನಲ್ಲಿ ಹೊರಡುತ್ತಿದ್ದ ಸಂದರ್ಭದಲ್ಲಿ ಮಾಲೀಕರ ಕೈಗೆ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾದ ಘಟನೆ ತಾಲೂಕಿನ ಬಣಕಲ್ ಬಿ. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿ. ಹೊಸಳ್ಳಿಯ ಮಂಜುನಾಥ್ ಬಂಧಿತ ಆರೋಪಿ. ಅದೇ ಗ್ರಾಮದ ಭಗತ್ ಅವರ ಕಣದಲ್ಲಿ ಹರಡಿದ್ದ ಕಾಫಿ ಬೀಜಗಳನ್ನು ಶುಕ್ರವಾರ 8ರ ಮಧ್ಯರಾತ್ರಿ ಮೂಟೆಯಲ್ಲಿ ತುಂಬಿ ಸಾಗಿಸಲು ಯತ್ನಿಸಿದಾಗ ಭಗತ್ ಮನೆಯಿಂದ ಹೊರಕ್ಕೆ ಬಂದರೆನ್ನಾಲಾಗಿದ್ದು, ಭಗತ್ ಅವರನ್ನು ಕಂಡವನೇ ಮೂಟೆ ಸಮೇತ ತನ್ನ ಬೈಕ್ ಅನ್ನು ಸ್ಟಾಟ್ ಮಾಡಲು ಯತ್ನಿಸಿದಾಗ ಮಾಲು ಸಮೇತ ಹಿಡಿದು ಬಣಕಲ್ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡು ಬಂಧಿಸಿ, ಕಾಫಿ ಮೂಟೆ ಹಾಗೂ ಬೈಕನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.