ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

2 ಲಕ್ಷ ಕುಟುಂಬಕ್ಕೆ ಗ್ಯಾಸ್ ಸಂಪರ್ಕವಿಲ್ಲ!

Parashurama
Updated On : 11 Feb 2013, 11:20 am

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ನೀಡುವ ಅನಿಲ ಸಿಲಿಂಡರ್‌ನ ಮಿತಿಯನ್ನು 6ಕ್ಕೆ ಸೀಮಿತಗೊಳಿಸಿದ್ದರಿಂದ ದೇಶದೆಲ್ಲೆಡೆ ವಿರೋಧ ವ್ಯಕ್ತವಾಯಿತು. ಹಲವು ಪ್ರತಿಭಟನೆಗಳು ನಡೆದವು. ಆದರೆ, ಗ್ರಾಮೀಣ ಪ್ರದೇಶದ ಜನರು ಈ ಹೋರಾಟಗಳಿಗೆ ಕಿವಿಗೊಡಲಿಲ್ಲ. ಕಾರಣ, ಬಹಳಷ್ಟು ಕುಟುಂಬಗಳು ಇಂದಿಗೂ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಅವಲಂಬಿತವಾಗಿಲ್ಲ.
ಹಾಗಂತ ಚಿಕ್ಕಮಗಳೂರು ಜಿಲ್ಲೆಯ ಅಂಕಿಅಂಶಗಳೇ ಹೇಳುತ್ತಿವೆ. ಜಿಲ್ಲೆಯಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳ  ಸಂಖ್ಯೆ 2,94,363. ಇವರಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 50,489 ಮಾತ್ರ. ಅಂದರೆ 2,43,874 ಕಾರ್ಡ್‌ದಾರರು ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಂಡಿಲ್ಲ. ಅಂದರೆ ಇವರು ಅಡುಗೆ ಮಾಡಲು ಸೌದೆ, ಸೀಮೆಎಣ್ಣೆ ಸ್ಟೌವ್ ಸೇರಿದಂತೆ ಇತರೆ ಸಂಪರ್ಕದ ಮೇಲೆ ಅವಲಂಬಿತರಾಗಿದ್ದಾರೆ. ಸಬ್ಸಿಡಿ ಸಹಿತ ನೀಡುವ ಅನಿಲ ಸಿಲಿಂಡರ್ ಮಿತಿ ಇಳಿಸಿದರೂ, ಏರಿಸಿದರೂ ಇವರ್ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ.
ಎಪಿಎಲ್ ಹೆಚ್ಚು: ಜಿಲ್ಲೆಯಲ್ಲಿ ಪಡಿತರ ಚೀಟಿ ಪಡೆದಿರುವ 2,94,363 ಕುಟುಂಬಗಳಲ್ಲಿ, ಅಂತ್ಯೋದಯ ಕಾರ್ಡ್ ಪಡೆದವರ ಸಂಖ್ಯೆ 22,613, ಬಿಪಿಎಲ್ 1,98,304, ಎಪಿಎಲ್ 73,446 ಕಾರ್ಡ್‌ದಾರರು ಇದ್ದಾರೆ. ಈ ಪೈಕಿ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಲ್ಲಿ 764, ಬಿಪಿಎಲ್ 21,268 ಹಾಗೂ 28,457 ಎಪಿಎಲ್ ಕುಟುಂಬಗಳು ಅನಿಲ ಸಂಪರ್ಕದ ಸೌಲಭ್ಯವನ್ನು ಪಡೆದುಕೊಂಡಿವೆ. ಅಂದರೆ ಎಪಿಎಲ್ ಪಡಿತರ ಚೀಟಿ ಪಡೆದಿರುವವರೇ ಹೆಚ್ಚು ಕುಟುಂಬಗಳು ಅನಿಲ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಂಡಿವೆ.
2,43,874 ಪಡಿತರ ಚೀಟಿದಾರರು ಅನಿಲ ಸಿಲಿಂಡರ್ ಪಡೆದುಕೊಂಡಿಲ್ಲ. ಇವರಲ್ಲಿ ಹೆಚ್ಚಿನ ಪಾಲು ಬಡವರು, ಆರ್ಥಿಕವಾಗಿ ಸದೃಢರಾಗಿಲ್ಲ. ಅದುದರಿಂದ ಅಡುಗೆ ಬೇಯಿಸಲು ಇತರೆ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
20 ಸಾವಿರ ಅರ್ಜಿ ತಿರಸ್ಕೃತ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ 35,934 ಅರ್ಜಿಗಳು ಆನ್ ಲೈನ್ ಮೂಲಕ ಬಂದಿದ್ದವು. ಇವುಗಳ ಪೈಕಿ ಸರಿಯಾದ ಮಾಹಿತಿ ಇಲ್ಲದಿದ್ದರಿಂದಾಗಿ 20,635 ಅರ್ಜಿಗಳು ತಿರಸ್ಕೃತಗೊಂಡಿವೆ. ಸಿಂಧುವಾಗಿರುವ ಅರ್ಜಿದಾರರಿಗೆ ಪಡಿತರ ಖಾಯಂ ಪಡಿತರ ಚೀಟಿ ನೀಡುವ ಕೆಲಸ ನಡೆಯುತ್ತಿದ್ದು, ಈವರೆಗೆ 9540 ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಇನ್ನು 2021 ಕಾರ್ಡ್‌ಗಳು ವಿತರಣೆಗೆ ಸಿದ್ದವಾಗಿವೆ. ಜಿಲ್ಲೆಯ ಮಲೆನಾಡು ಭಾಗದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಬಯೋವುಟ್ರಿಕ್ ಯಂತ್ರಗಳನ್ನು  ಅಳವಡಿಸಲಾಗಿದ್ದು, ಈ ಪೈಕಿ ಶೃಂಗೇರಿ ತಾಲೂಕಿನಲ್ಲಿ 17, ಎನ್.ಆರ್.ಪುರ- 31, ಚಿಕ್ಕಮಗಳೂರು ಗ್ರಾಮಾಂತರದಲ್ಲಿ 20, ನಗರದಲ್ಲಿ 29, ಕೊಪ್ಪ ತಾಲೂಕಿನಲ್ಲಿ 46 ಯಂತ್ರಗಳನ್ನು ಅಳವಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments