ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇವಾಲಯಗಳಿಂದ ಮನಸ್ಸಿಗೆ ಶಾಂತಿ, ಸಮಾಧಾನ

Parashurama
Updated On : 11 Feb 2013, 10:55 am

ಚಿಕ್ಕಮಗಳೂರು: ಮಾನವನ ಬದುಕಿಗೆ ಎಲ್ಲಾ ಸಂದರ್ಭಗಳಲ್ಲೂ ದೇವಾಲಯಗಳು ಶಾಂತಿ, ಸಮಾಧಾನ ನೀಡುತ್ತವೆ ಎಂದು ಸಿಎಸ್‌ಐ ದಕ್ಷಿಣ ಭಾರತ ಕ್ರೈಸ್ತಸಭೆ ಉಪಾಧ್ಯಕ್ಷ ಫಾದರ್ ಕೆ.ಪಿ. ದೇವಕುಮಾರ್ ಹೇಳಿದ್ದಾರೆ.
ನಗರದ ಬೇಲೂರು ರಸ್ತೆಯಲ್ಲಿರುವ ಸಂತ ಅಂದ್ರೆಯನ ದೇವಾಲಯದ 131ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಗೋಪುರ ಉದ್ಘಾಟಿಸಿ ಮಾತನಾಡಿದರು. ಈ ಆಲಯವನ್ನು ದಾನಿಗಳ ಸಹಾಯದಿಂದ   ಒಂದು ಕೋಟಿ ರುಪಾಯಿ ಅಂದಾಜಿನಲ್ಲಿ ನಿರ್ಮಿಸಲಾಗಿದೆ. ಈ ಗೋಪುರಕ್ಕೆ ರು. 12ರಿಂದ ರು. 13 ಲಕ್ಷ ಖರ್ಚು ಮಾಡಲಾಗಿದೆ ಎಂದರು.
ಸಭಾ ಪಾಲಕರು ಬೋಧನೆ ಮಾಡುವಾಗ ಬಹಳ ಉತ್ತಮ ಬೋಧನೆ ಎಂದು ಹೊಗಳಿ ಹೋಗುವುದಕ್ಕಿಂತ  ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇವರಿಗೆ ವಿಧೇಯರಾಗಿ ಸಮಾಜಕ್ಕೆ ಒಳಿತು ಮಾಡುವ ಕಾರ್ಯ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫಾ. ಜೋಶ್ವಶಾಂತರಾಜ್ ಮಾತನಾಡಿ, ದಾನಿಗಳ ಹಾಗೂ ಸಭಿಕರ ನೆರವಿನಿಂದ ಮತ್ತು ಹಿಂದಿನ ಎಲ್ಲಾ ಸಭಾ ಪಾಲಕರು ಹಾಗೂ ಸಭಾ ಪಾಲನಾ ಸಮಿತಿ ಸಹಾಯದಿಂದ ಈ ದೇವಾಲಯ ನಿರ್ಮಿಸಲಾಗಿದೆ ಎಂದರು.
ಸಭಾ ಪಾಲಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಫಾದರ್ ಜೇಕಪ್, ಫಾದರ್ ಮೋಹನ್, ಫಾದರ್ ಮೇಬಲ್ ಹಾಗೂ ಸಭಾ ಪಾಲನ ಸಮಿತಿ ಕಾರ್ಯದರ್ಶಿ ಶಶಿಧರ್, ಖಜಾಂಚಿ ಜೇಕಬ್, ಸದಸ್ಯರಾದ ವತ್ಸಲಾ ಕಾಂತರಾಜ್, ವಿಲ್ಸನ್ ಪ್ರೇಂಕುಮಾರ್, ಕೆ.ಜೆ. ಪ್ರೇಂಕುಮಾರ್, ಯೇಸುಪ್ರಸಾದ್, ಶೋಭಾ ಉಪಸ್ಥಿತರಿದ್ದರು.
ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಅಂದ್ರೆಯನ ದೇವಾಲಯದಲ್ಲಿ ಮಂಗಳವಾರ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments