ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳು ಪರಿಶುದ್ಧ

Parashurama
Updated On : 11 Feb 2013, 10:55 am

ಮೂಡಿಗೆರೆ: ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳು ಪರಿಶುದ್ಧವಾಗಿದೆ. ಸೌಹಾರ್ಧತೆ ಬಗ್ಗೆ ಹೆಚ್ಚಿನದಾಗಿ  ಪರಿಕಲ್ಪಿಸುತ್ತದೆಯೇ ಹೊರತು ಕೋಮುವಾದದ ಕಡೆಗೆ ಕರೆ ನೀಡುವುದಿಲ್ಲ ಎಂದು ಪರಂಗಿಪೇಟೆಯ ಮುದರಸಾದ ಕೆ.ಎಸ್. ಉಸ್ಮಾನ್ ದಾರಿಮಿ ತಿಳಿಸಿದರು.
ಅವರು ಭಾನುವಾರ ತಾಲೂಕಿನ ಕಿತ್ತಲೆಗಂಡಿ ಗ್ರಾಮದಲ್ಲಿ ಮೂರು ದಿನ ನಡೆದ ಹಿದಾಯುತುಲ್ ಇಸ್ಲಾಂ ನೂತನ ಮದರಸ ಕಟ್ಟಡದ ಉದ್ಘಾಟನೆ, ಮದರಸ ವಿದ್ಯಾರ್ಥಿಗಳ ಈದ್‌ಮಿಲಾದ್, ಹಾಗೂ ಸೌಹಾರ್ಧ ಸಂಗಮ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರವಾದಿ ಪೈಗಂಬರ್ ಅವರು ಕೋಮುವಾದಿಗೆ ಕರೆ ನೀಡಿದವನು ನಮ್ಮವನಲ್ಲ ಎಂದು ಸಾರಿ ಹೇಳಿದವರು.ಅವರ ಅನೇಕ ಹಿತ ನುಡಿಗಳನ್ನು ನಮ್ಮ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರೂ ಸೌಹಾರ್ಧತೆಯಿಂದ ಬದುಕಬಹುದು ಎಂದು ಹೇಳಿದರು.
ಬೇಸರದ ಸಂಗತಿ: ಗ್ರಾಪಂ ಮಾಜಿ ಅಧ್ಯಕ್ಷ ಎ.ಸಿ. ಅಯೂಬ್ ಮಾತನಾಡಿ, ಈ ದೇಶದಲ್ಲಿ ಯಾರೇ ದೇಶದ್ರೋಹ ಕೆಲಸ ಮಾಡಿದರೂ ಅವರನ್ನು ಹೆಚ್ಚು ಸಮಯ ಇಟ್ಟುಕೊಳ್ಳದೆ ಗಲ್ಲಿಗೇರಿಸಬೇಕು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇಶದ್ರೋಹಿ ಕೆಲಸ ಮಾಡುವವರನ್ನು ಬಿಂಬಿಸುತ್ತಾ ಸಮುದಾಯವನ್ನೇ ದೂಷಿಸುವ ಸಂದರ್ಭ ತಂದೊಡ್ಡುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.  
ಜೆಡಿಎಸ್ ತಾಲೂಕು ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ, ಜಿಪಂ ಸದಸ್ಯ ಎಂ.ಎಸ್. ಅನಂತ್, ತಾಪಂ ಮಾಜಿ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಾಮಿಯಾ ಮಸ್ಸಿದಿಯ ಬಿ.ಈ. ಪೋಡಿಯಬ್ಬ ವಹಿಸಿದ್ದರು. ಕೆಜೆಪಿ  ಮುಖಂಡರಾದ ಅನ್ವರ್, ಭಾಷಾ, ದಾರದಹಳ್ಳಿ ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಸಲೀಂ ಪೈಜಿ, ಪರಮೇಶ್ ಗೌಡ, ಹಾಲಪ್ಪ ಗೌಡ, ಸಲೀಂ ಫೈಝಿ ಇರ್ಫಾನಿ, ರಾಮೇಗೌಡ, ಕಿರುಗುಂದ ಅಬ್ಬಾಸ್, ಪರಮೇಶ್‌ಗೌಡ, ಅಬ್ಬಾಸ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments