ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಿಯಮ ಉಲ್ಲಂಘನೆ: ಕ್ರಮದ ಎಚ್ಚರಿಕೆ

Parashurama
Updated On : 11 Feb 2013, 11:03 am

ಮೂಡಿಗೆರೆ: ಇಂದಿನ ದಿನಗಳಲ್ಲಿ ಕೆಲವು ಆಟೋ ಚಾಲಕರು ಮತ್ತು ಮಾಲಿಕರು ಸಂಚಾರಿ ನಿಯಮಗಳನ್ನು ಪಾಲಿಸದೇ ಉಲ್ಲಂಘಿಸುತ್ತಿದ್ದಾರೆ. ಮತ್ತೆ ಕೆಲವು ಚಾಲಕರು ಪಾನಮತ್ತರಾಗಿ ಆಟೋ ಓಡಿಸುತ್ತಿದ್ದು ಇದು ಕಾನೂನಿಗೆ ವಿರುದ್ಧವಾಗಿದೆ. ಅಂತಹ ಚಾಲಕರ ಪರವಾನಗಿ ರದ್ದುಪಡಿಸಲು ಸಾರಿಗೆ ಆಯುಕ್ತರಿಗೆ ತಿಳಿಸಬೇಕಾಗುತ್ತದೆ ಎಂದು ಸಹಾಯಕ ಠಾಣಾಧಿಕಾರಿ ಉಮಾನಾಥ್ ಎಚ್ಚರಿಕೆ ನೀಡಿದರು.
ಪಟ್ಟಣದ ಗಂಗನಮಕ್ಕಿಯಲ್ಲಿ ಹಾಸನದ ಹಾಸಾನಾಂಬ ಮೋಟಾರ್ಸ್ ವತಿಯಿಂದ ಅಟುಲ್ ಗ್ರಾಹಕ ಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಟೋ ಚಾಲಕರಿಗೆ ಕಾನೂನು ಪರಿಪಾಲನೆ ಮಾಡುವಂತೆ ತಿಳಿಸಿದರು.
ಸಹಾಯಕ ಠಾಣಾಧಿಕಾರಿ ತಿಮ್ಮೇಗೌಡ ಮಾತನಾಡಿ, ಚಾಲಕರು ಸಮವಸ್ತ್ರ ಧರಿಸಿ ವಾಹನವನ್ನು ಚಲಾಯಿಸುವುದರೊಂದಿಗೆ ದಾಖಲಾತಿಗಳ ಪ್ರತಿಯನ್ನು ವಾಹನದಲ್ಲಿರಿಸಿಕೊಳ್ಳುವಂತೆ ತಿಳಿಸಿದರು.
ಆಟೋ ಚಾಲಕರು ತಮ್ಮ ಎರಡು ಬದಿಗಳಲ್ಲಿ ಮತ್ತು ಹಿಂಬದಿಯಲ್ಲಿ ಅಧಿಕ ಜನರನ್ನು ತುಂಬಿಕೊಂಡು ಹೋಗುವುದರ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮವಸ್ತ್ರ ಧರಿಸಿ: ಹಾಸನಾಂಬ ಮೋಟಾರ್ಸ್‌ನ ಮ್ಯಾನೇಜಿಂಗ್ ಪಾರ್ಟ್‌ನರ್ ಬಿ.ಕೆ. ಚನ್ನಕೇಶವ ಮಾತನಾಡಿ, ತಮ್ಮ ಕಂಪೆನಿಯ ಅಟುಲ್ ಆಟೋಗಳು ಮೂಡಿಗೆರೆ ತಾಲೂಕಿಗೆ ಪಾದಾರ್ಪಣೆ ಮಾಡಿ ಒಂದೂವರೇ ವರ್ಷಗಳಾಗಿದೆ. 89 ಆಟೋಗಳು ಸಂಚರಿಸುತ್ತಿವೆ. ತಮ್ಮ ಕಂಪೆನಿಯ ಆಟೋಗಳನ್ನು ಚಲಾಯಿಸುವ ಚಾಲಕರು ಕಡ್ಡಾಯವಾಗಿ ಸಮವಸ್ತ್ರಗಳನ್ನು ಧರಿಸಬೇಕೆಂಬ ನಿಟ್ಟಿನಲ್ಲಿ ಅಟುಲ್ ಆಟೋ ಚಾಲಕರಿಗೆ ಸಮವಸ್ತ್ರಗಳನ್ನು  ಕಂಪೆನಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಸೇಲ್ಸ್ ಮ್ಯಾನೇಜರ್ ಪ್ರದೀಪ್ ಜೈನ್ ಮಾತನಾಡಿ. ಹಾಸನ, ಚಿಕ್ಕಮಗಳೂರು, ಮೂಡಿಗೆರೆ, ಸೇರಿದಂತೆ ಅನೇಕ ತಾಲೂಕುಗಳಲ್ಲಿ ಅಟುಲ್ ಆಟೋ ವತಿಯಿಂದ ಉಚಿತ ತಪಾಸಣೆ ನಡೆಸುವುದರೊಂದಿಗೆ  ಚಾಲಕರಿಗೆ ಸಮವಸ್ತ್ರ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಟುಲ್ ಡೀಲರ್ ಮಹದೇವ್ ವಹಿಸಿದ್ದರು. ಆಟೋ ಚಾಲಕರ ಸಂಘದ ಅಧ್ಯಕ್ಷ ಕಿರಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments