ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪದಾಧಿಕಾರಿಗಳ ಆಯ್ಕೆ

Parashurama
Updated On : 11 Feb 2013, 11:05 am

ಕೊಪ್ಪ: ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಚುನಾವಣೆಯ ಮೂಲಕ ಆಯ್ಕೆಮಾಡಲಾಯಿತು.
 ನೂತನ ಅಧ್ಯಕ್ಷರಾಗಿ ಎಚ್.ಆರ್. ಸಂಜೀವ್, ಉಪಾಧ್ಯಕ್ಷರಾಗಿ ಶಂಕರಪ್ಪ, ಪ್ರಧಾನಕಾರ್ಯದರ್ಶಿಯಾಗಿ ಸತ್ಯನಾರಯಣ್, ಕಾರ್ಯದರ್ಶಿಯಾಗಿ ಕಿರಣ್ ಕೇರೆ ಉಮೇಶ್ ಚಂದ್ರ, ಖಜಾಂಚಿಯಾಗಿ ಬಸ್ರಿಕಟ್ಟೆ ಗೋಪಾಲರನ್ನು ಆಯ್ಕೆ ಮಾಡಲಾಯಿತು ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ಶೇಷಾದ್ರಿ ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ಶೃಂಗೇರಿ: ಪಟ್ಟಣದಲ್ಲಿ ತಾಲೂಕು ಕಚೇರಿಗೆ ಸೇರಿದ ಜಮೀನನ್ನು ಕಬಳಿಕೆ ಮಾಡುತ್ತಿರುವುದನ್ನು ವಿರೋದಿಸಿ ಯುವ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಳಿಗ್ಗೆ ತಾಲೂಕು ಕಚೇರಿ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಕಿಸಾನ್ ಸೆಲ್ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಆರ್‌ಟಿಒ ಕಚೇರಿ ಮಂಜೂರು
ತರೀಕೆರೆ: ಪಟ್ಟಣಕ್ಕೆ ಆರ್‌ಟಿಒ ಕಚೇರಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಡಿ.ಎಸ್. ಸುರೇಶ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಆರ್‌ಟಿಒ ಕಚೇರಿ ಪ್ರಾರಂಭಿಸುವುದರಿಂದ ವಾಹನಗಳ ಡಿಎಲ್, ರಿಜಿಸ್ಟ್ರೇಶನ್ ಇತ್ಯಾದಿ ದಾಖಲಾತಿಗಳನ್ನು ತರೀಕೆರೆಯಲ್ಲೇ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಕಿ ಅಕಸ್ಮಿಕ: ನಷ್ಟ
ತರೀಕೆರೆ: ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನ ಮನೆಯೊಂದರಲ್ಲಿ ಅಕಸ್ಮಿಕ ಬೆಂಕಿ ಬಿದ್ದು, ಮನೆಯಲ್ಲಿದ್ದ ಬೆಲೆ ಬಾಳುವ ಬಟ್ಟೆ, ದಾಖಲಾತಿ ಪತ್ರಗಳು, ಆಲ್ಮೇರಾ, ಮತ್ತಿತರ ಪದಾರ್ಥಗಳು ಭಸ್ಮವಾಗಿ ಅಪಾರ ನಷ್ಟವಾಗಿದೆ. ಗಾಳಿಹಳ್ಳಿ ಕ್ರಾಸ್ ನಿವಾಸಿ ಶಿವಪ್ರಸಾದ್‌ಗೆ ಸೇರಿದ ಮನೆಯಾಗಿದೆ. ಆಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments