ಮಲ್ಲೇಶ್ವರ ಬಡಾವಣೆಗೆ ಸೌಲಭ್ಯಕ್ಕೆ ಆಗ್ರಹ
ಕಡೂರು: ಪುರಸಭೆ ವ್ಯಾಪ್ತಿಯ ಮಲ್ಲೇಶ್ವರ ಬಡಾವಣೆಗಳಿಗೆ ಕೂಡಲೇ ಅಗತ್ಯ ಸವಲತ್ತು ಒದಗಿಸದಿದ್ದಲ್ಲಿ ಪುರಸಭೆ ಮುಂದೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಹೇಳಿದೆ.
ಈ ಬಗ್ಗೆ ಬಡಾವಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ವಿ. ವಾಸು, ತನ್ವೀರ್ ಅಹಮದ್, ಬಡಾವಣೆಗಳಲ್ಲಿ ಹಕ್ಕಿಪಿಕ್ಕಿ, ದೊಂಬಿದಾಸರು ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರು ಹೆಚ್ಚಾಗಿ ವಾಸಿತ್ತಿದ್ದಾರೆ. 63 ಕುಟುಂಬಗಳಿಗೆ ಈ ಬಡಾವಣೆಗಳಲ್ಲಿ ನಿವೇಶನ ಹಾಗೂ ತಲಾ 25 ಸಾವಿರ ರು. ಸಾಲ ನೀಡಿ ಮನೆಗಳ ನಿರ್ಮಾಣ ಮಾಡಿಕೊಡಲಾಗಿತ್ತು. ಆದರೆ ಪುರಸಭೆ ಕನಿಷ್ಠ ಸವಲತ್ತು ನೀಡದೆ ಜವಬ್ದಾರಿ ಮರೆತಿದೆ ಎಂದು ಆರೋಪಿಸಿದರು.
ಅಂಗೂರ್, ಅನ್ಸರ್, ಶಂಕರಪ್ಪ, ಗೋವಿಂದಪ್ಪ, ಲಕ್ಷ್ಮಮ್ಮ, ರಂಗಸ್ವಾಮಿ, ಕೃಷ್ಣಪ್ಪ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.