ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

16ರಂದು ಕೃಷಿ ಉತ್ಸವ- 2013

Parashurama
Updated On : 12 Feb 2013, 10:40 am

ಕೊಪ್ಪ: 16 ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ 2013.ರ ಕೃಷಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಸುಕೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಉಧ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ನಡೆಸಲಿದ್ದು, ಕೃಷಿ ವಸ್ತು ಪ್ರದರ್ಶನದ ಉಧ್ಘಾಟನೆಯನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ನೇರವೇರಿಸಲಿದ್ದಾರೆ.  ಅಧ್ಯಕ್ಷತೆಯನ್ನು ಕೃಷಿ ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಜಿ. ಶಂಕರ್ ವಹಿಸಿಲಿದ್ದು ಶ್ರೀ ಕ್ಷೇ.ಧ.ಗ್ರಾ.  ಯೋಜನೆಯ ಹಣಕಾಸು ನಿರ್ದೇಶಕ. ಶಾಂತಾರಾಮ್ ಆರ್.ಪೈ,ಚಿಕ್ಕಮಗಳೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ರಾಜು ಪಾಲುಗೊಳ್ಳಲಿದ್ದಾರೆ.
ಕೃಷಿ ಉತ್ಸವದ ಅಂಗವಾಗಿ ರು. ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದ್ದು, 11-13.0ರಿಂದ 1ರವರೆಗೆ ನಡೆಯುವ ಕೃಷಿ ಮತ್ತು ತೋಟಗಾರಿಕಾ ಸಮಗ್ರ ನಿರ್ವಹಣೆ ಎಂಬ ವಿಷಯಾಧಾರಿತ ಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮೂಡಿಗೆರೆ ತೋಟಗಾರಿಕಾ ವಿದ್ಯಾಲಯದ ವಿಜ್ಞಾನಿ ಡಾ. ಶಿವಪ್ರಸಾದ್ ಪಾಲ್ಗೊಳ್ಳುವರು.
2 ರಿಂದ 3. ಗಂಟೆವರೆಗೆ ನಡೆಯುವ ಗ್ರಾಮೀಣ ಪ್ರದೇಶದಲ್ಲಿ ಸ್ವ-ಉದ್ಯೋಗದ ಅವಕಾಶಗಳ ಎಂಬ ವಿಷಯಾಧಾರಿತ ಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮದ ಸಂಯೋಜಕಿ ಡಾ. ಸುಕನ್ಯ ಟಿ.ಎಸ್. ಪಾಲ್ಗೊಳ್ಳುವರು.
ಗ್ರಾಮೀಣ ಸ್ವಾವಲಂಬನೆಯಲ್ಲಿ ಹೈನುಗಾರಿಕೆ ಮತ್ತು ಇತರ ಪಶು ಸಂಗೋಪನೆಯ ಮಹತ್ವ ಎಂಬ ವಿಷಯಾಧಾರಿತ ವಿಚಾರಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಯಾಗಿ ಶಿವಮೊಗ್ಗದ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ, ಡಾ.ಕೆ.ಸಿ. ವೀರಣ್ಣ ಪಾಲ್ಗೊಳ್ಳುವರು ಎಂದರು.
ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸದಸ್ಯರಾದ ಸಹಕಾರ ಸಾರಿಗೆ ಅಧ್ಯಕ್ಷ ಜಿ.ಆರ್. ವಿಶ್ವನಾಥ್, ಗ್ರಾಮಾಂತರ ಗ್ರಾಪಂ ಅಧ್ಯಕ್ಷೆ ಶಾರದ ವಿಠಲ್ ಎಂ.ಜಿ. ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments