ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗುಂಡಿಕ್ಕಿ ವ್ಯಕ್ತಿ ಕೊಲೆ: ಠಾಣೆ ಎದುರು ಗ್ರಾಮಸ್ಥರ ಪ್ರತಿಭಟನೆ

Parashurama
Updated On : 12 Feb 2013, 10:38 am

ಮೂಡಿಗೆರೆ: ರೈತ ಮುಖಂಡನ ಮನೆಯ ಸಮೀಪದಲ್ಲಿರುವ ಸರ್ಕಾರಿ ಜಾಗದಲ್ಲಿ ಸಮುದಾಯ ನಿರ್ಮಾಣಕ್ಕೆ ಗ್ರಾಮಸ್ಥರು ನಿರ್ಧರಿಸಿ ರೈತನ ಮನೆಗೆ ಹೋಗಿದ್ದರು. ನಮ್ಮ ಮನೆಗೆ ಎಲ್ಲರೂ ಬನ್ನಿ ಈ ಬಗ್ಗೆ ಮಾತನಾಡೋಣ ಎಂದು ಗ್ರಾಮಸ್ಥರನ್ನು ಆಹ್ವಾನಿಸಿದ್ದ ರೈತ ಮುಖಂಡ. ಗ್ರಾಮಸ್ಥರು ಬಂದ ಕೂಡಲೇ ಅವರ ವಿರುದ್ಧ ಹರಿಹಾಯ್ಡು ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿರುವ ಘಟನೆ  ತಾಲೂಕಿನ ಗೋಣಿಬೀಡಿನ ದೋಣಗೂಡಿನಲ್ಲಿ ನಡೆದಿದೆ.
ಜೀವನ್‌ಗೌಡ ಮೃತ ವ್ಯಕ್ತಿ. ಘಟನೆಯಲ್ಲಿ ಗಾಯಗೊಂಡ ಸ್ವಾಮಿ ಮತ್ತು ಸುಧೀಶ್‌ನನ್ನು ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ.
ಗ್ರಾಮಸ್ಥರು ಮನೆ ಬಳಿಗೆ ಬರುತ್ತಿದ್ದಂತೆ ರೈತ ಮುಖಂಡ ವೆಂಕಟೇಗೌಡ ಮತ್ತು ಆತನ ಹೆಂಡತಿ, ಮಗ ಕೋಪಗೊಂಡು ಗ್ರಾಮಸ್ಥರ ಮೇಲೆ ಆಕ್ರಮಣ ಮಾಡಿ ವೆಂಕಟೇಗೌಡರನ್ನು ಹೊಡೆಯುವಂತೆ ಪ್ರೇರಿಸಿದ್ದಾರೆ. ಅಲ್ಲದೆ ಹೆಂಡತಿ ಮತ್ತು ಮಗ ದೊಣ್ಣೆ, ಕುಡುಗೋಲು ಹಿಡಿದು ಹೊಡೆಯಲು ಮುಂದಾಗಿದ್ದಾರೆ. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಕಲ್ಲು ಹೊಡೆದಿದ್ದು, ಮೂವರು ಮನೆ ಒಳಗಡೆ ಬಚ್ಚಿಟ್ಟುಕೊಂಡಿದ್ದ ಸಂದರ್ಭದಲ್ಲಿ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಟುಂಬದ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಜೀವನ್‌ಗೌಡನ ಶವವನ್ನು ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದರು.
ಜಿಲ್ಲಾ ರಕ್ಷಣಾಧಿಕಾರಿ ಶಶಿಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಿತ್ರಾಹರಾಜೆ, ಪೊಲೀಸ್ ಉಪ ಅಧಿಕ್ಷಕ ಎಸ್.ಎಲ್. ನಾಯಕ್, ವೃತ್ತ ನಿರೀಕ್ಷಕ ರಮೇಶ್, ಠಾಣಾಧಿಕಾರಿ ರೇವಣ್ಣ ಸ್ಥಳಕ್ಕಾಗಮಿಸಿ ತನಿಖೆ ನಡೆಸಿ ಕಲಂ 111ರು., ರು.02, ರು.07, ರು.4 ಐಪಿಸಿ ಭಾರತೀಯ ದಂಡಕಾಯ್ದೆ ಪ್ರಕರಣ ದಾಖಲಿಸಿದ್ದಾರೆ.
ಠಾಣಾಧಿಕಾರಿ ವರ್ಗಾಯಿಸಿ: ಕಳೆದೆರಡು ದಿನಗಳ ಹಿಂದೆ ವೆಂಕಟೇಗೌಡರು ಜಾಗದ ವಿಚಾರಕ್ಕೆ ಬಂದರೇ ನಿಮ್ಮನ್ನು ಕೊಂದುಬಿಡುತ್ತೇನೆ ಎಂದು ಬಂದೂಕು ತೋರಿಸಿ ಹೆದರಿಸಿದ್ದರು.
ಈ ವಿಚಾರವಾಗಿ ದೂರು ನೀಡಿದಾಗ ವೆಂಕಟೇಗೌಡರ ಮನೆಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದರು. ಆದರೆ ಅಲ್ಲಿ ಏನು ಮಾತನಾಡಿದರು ಎಂಬುದು ಮಾತ್ರ ಗೋಪ್ಯವಾಗಿತ್ತು. ಗೋಣಿಬೀಡು ಠಾಣಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ತಕ್ಷಣ ಸೇವೆಯಿಂದ ವಜಾಗೊಳಿಸುವಂತೆ ಜಿಪಂ ಸದಸ್ಯ ಶಿವೇಗೌಡ ಜಿಲ್ಲಾ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments