ದೇವಾಲಯಗಳ ಜೀರ್ಣೋದ್ಧಾರಕ್ಕೆ ರು. 15.72 ಲಕ್ಷ
ಕಡೂರು: 2012 ಹಾಗೂ 2013 ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ತಾಲೂಕಿನ 58 ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ 15.72 ಲಕ್ಷ ರು. ಅನುದಾನ ನೀಡಲಾಗಿದೆ ಎಂದು ಯೋಜನೆಯ ತಾಲೂಕು ಸಂಯೋಜನಾಧಿಕಾರಿ ದಿನೇಶ್ ಹೇಳಿದರು.
ತಾಲೂಕಿನ ಕಡೂರಹಳ್ಳಿ ಅಂಬೇಡ್ಕರ್ ನಗರದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರದ ಯೋಜನೆಯಿಂದ ಮಂಜೂರಾದ 30 ಸಾವಿರ ರು.ಗಳ ಚೆಕ್ಕನ್ನು ಸಮಿತಿಗೆ ವಿತರಿಸಿ ಮಾತನಾಡಿ, 5 ವರ್ಷದ ಹಿಂದೆ ತಾಲೂಕಿನಲ್ಲಿ ಶ್ರೀ ಮಂಜುನಾಥಸ್ವಾಮಿಯವರ ಆಶೀರ್ವಾದದಿಂದ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಹಲವು ಪ್ರಗತಿಪರ ಕಾರ್ಯಕ್ರಮಗಳು ಮುಂದುವರಿಯುತ್ತಿವೆ.
ದೇವಾಲಯ ಸಮಿತಿ ಅಧ್ಯಕ್ಷ ಕೆ. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಟಿ. ಗೋವಿಂದಸ್ವಾಮಿ ಯೋಜನೆಯ ಮೇಲ್ವಿಚಾರಕ ಅನಂತು, ಬಾಬು ಪ್ರಸಾದ್, ವ್ಯವಸ್ಥಾಪಕ ಉದಯ್, ಅಂಬಿಕಮ್ಮ, ಕೆ.ಟಿ. ಈಶ್ವರಪ್ಪ, ಶ್ರೀನಿವಾಸ್,ನಾಗರಾಜು, ಮೂಡಲಗಿರಿಯಪ್ಪ, ಬಸವರಾಜು, ಕೆ.ಎಂ. ಮೂರ್ತಪ್ಪ, ಕೆ.ಟಿ. ಮಂಜಪ್ಪ, ಕೆ. ಮಂಜುನಾಥ್, ನಾಗರಾಜು ಇದ್ದರು.