ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ದುರಸ್ತಿಗೆ ಆಗ್ರಹಿಸಿ 27 ರಿಂದ ವಾಹನ ಸಂಚಾರ ಸ್ಥಗಿತ

Lingaraj Badiger
Updated On : 13 Feb 2013, 10:46 am

ತರೀಕೆರೆ: ವಡ್ನೇರಿ, ಬುಕ್ಕಾಂಬುದಿ, ಅಜ್ಜಂಪುರ ಮತ್ತು ಬೀರೂರು 30 ಕಿಮಿ ವ್ಯಾಪ್ತಿಯ ರಸ್ತೆ ಹಾಳಾಗಿದ್ದು ಕ್ರಮ ಕೈಗೊಳ್ಳದಿದ್ದರೆ 27 ರಿಂದ ಈ ಮಾರ್ಗದ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಲು ಚಿಕ್ಕಮಗಳೂರು ಜಲ್ಲಾ ಬಸ್ ಆಪರೇಟರ್ಸ್ ಅಸೋಸಿಯೇಶನ್ ನಿರ್ಧರಿಸದೆ.
 ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಬಸ್ ಅಸೋಸಿಯೇಶನ್ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿದೆ.
ಭಾರಿ ನಷ್ಟ: ಮುಖ್ಯವಾಗಿ ವಡ್ನೇರಿ, ಬುಕ್ಕಾಂಬುದಿ ಅಜ್ಜಂಪುರ, ಬೀರೂರು ಮಾರ್ಗದ ರಸ್ತೆ ಹಾಳಾಗಿದ್ದು, ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ನೆಡೆಸುವುದು ಕಷ್ಟವಾಗಿದೆ. ವಾಹನಗಳ ಬೆಲೆ ಬಾಳುವ ಬ್ಲೇಡ್ಸ್ ಹಾಗೂ ಟೈರ್‌ಗಳು ಒಡೆದು ಪದೇ ಪದೇ ಅಪಘಾತಕ್ಕೆ ಗುರಿಯಾಗುತ್ತವೆ. ರಸ್ತೆ ತುಂಬಾ ಆಳೆತ್ತರದ ಗುಂಡಿಗಳಲ್ಲಿ ಬಸ್ಸುಗಳು ಇಳಿದು ಹತ್ತಿ ಸಂಚರಿಸುವಾಗ ವಾಹನಗಳ ಬಿಡಿ ಭಾಗಗಳು ಎಲ್ಲೆಂದರಲ್ಲಿ ಕಿತ್ತು ಹೋಗಿ ಬಸ್ಸುಗಳು ಹಾಳಾಗಿ ಅಪಾರ ನಷ್ಟ ಅನುಭವಿಸುತ್ತಿವೆ.
 ಇದರಿಂದಾಗಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ತಲುಪಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ,  ವಯೋವೃದ್ದರು, ಬಸುರಿ ಹೆಣ್ಣು ಮಕ್ಕಳು, ಆಸ್ಪತ್ರೆಗೆ ಹೋಗಿಬರುವ ರೋಗಿಗಳು ಸಂಚಾರ ವ್ಯವಸ್ಥೆ ಸರಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ರಮ ತೆಗೆದುಕೊಂಡಿಲ್ಲ: ಅಸೋಸಿಯೇಶನ್ ಅನೇಕ ಬಾರಿ ಮನವಿ ಸಲ್ಲಿಸಿದರೂ ಸಂಬಂದಿಸಿದವರು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
 ರಸ್ತೆ ದುರಸ್ತೀಕರಣಗೊಳಿಸುವ ಬಗ್ಗೆ 7 ದಿನಗಳೊಳಗೆ ಯಾವ ಕ್ರಮವನ್ನ ಕೈಗೊಳ್ಳುವರೆಂದು ಸಂಘ ಅವಲೋಕನ ಮಾಡಿ ಇಲಾಖೆ ವಿಫಲವಾದರೆ 27 ರಂದು ಮಾರ್ಗದ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಬಸ್ ಅಪರೇಟರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಬಿ.ಪಿ. ಚಂದ್ರಶೇಖರ್ ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement