ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಿಕ್ಷಣದ ಜತೆ ಸಂಸ್ಕಾರ ಕಲಿಸಿ; ರೇಖಾ ಹುಲಿಯಪ್ಪಗೌಡ

Lingaraj Badiger
Updated On : 13 Feb 2013, 10:46 am

ಚಿಕ್ಕಮಗಳೂರು: ಮಕ್ಕಳಿಗೆ ಓದು ಬರಹ ಕಲಿಸುವ ಜೊತೆ ಅವರಲ್ಲಿ ಸಂಸ್ಕಾರಯುತ ವ್ಯಕ್ತಿತ್ವ ಬೆಳೆಸುವುದು ಬೋಧಕರು ಹಾಗೂ ಪೋಷಕರ ಜವಾಬ್ದಾರಿ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಕೋಟೆ ಕಣದಾಳ್ ರಸ್ತೆಯ ಕ್ರೈಸ್ ದ ಕಿಂಗ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಮುಖ್ಯತೆ ಅರಿಯಲಿ: ಹಳ್ಳಿಯಿಂದ ದಿಲ್ಲಿವರೆಗಿನ ದೆಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ, ಅದಕ್ಕನುಗುಣವಾಗಿ ಸರ್ಕಾರಗಳು ಶಿಕ್ಷಣಕ್ಕೆ ಅಷ್ಟೇ ಪ್ರಾಮುಖ್ಯತೆ ನೀಡುತ್ತಿವೆ ಎಂದ ಅವರು, ಈ ಸಂಬಂಧ ಸಮಾಜಕ್ಕೆ ಎಂತಹ ನಾಗರಿಕರನ್ನು ನೀಡಬೇಕೆಂಬುದನ್ನರಿತು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಕುಮಾರ್ ಮಾತನಾಡಿ, ಪಾಠ, ಪ್ರವಚನದಲ್ಲಿ ವರ್ಷಪೂರ್ತಿ ಮಿಂದಿರುವ ಶಿಕ್ಷಕರಿಗೆ ಎರಡು ದಿನ ಮನೋರಂಜನೆ ಮತ್ತು ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆ ಪ್ರದರ್ಶಿಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಗುರುಹಿರಿಯರಿಗೆ ಯಾರು ಗೌರವಿಸುವುದಿಲ್ಲವೊ ಅವರು ಜೀವನದಲ್ಲಿ ನೋವು ಅನುಭವಿಸುತ್ತಾರೆ ಎಂಬ ಅರ್ಥದ ಜನಪದ ಹಾಡನ್ನು ಶುಶ್ರಾವ್ಯವಾಗಿ ಹಾಡಿ ರಂಜಿಸುವ ಮೂಲಕ ಎಲ್ಲರ ಮನಗೆದ್ದರು.
ಪ್ರಾಂಶುಪಾಲೆ ಚಂದ್ರಪ್ರಭ, ಡಾ. ಮಂಜುನಾಥ್, ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ತನುಜ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಸುಮ ಕಾರ್ಯಕ್ರಮ ನಿರೂಪಿಸಿ, ತರನಂತಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement