ಗೂಡ್ಸ್ ನಿಲುಗಡೆ: ಪ್ರಯಾಣಿಕರಿಗೆ ಕಿರಿಕಿರಿ
ಬೀರೂರು: ಪ್ರಯಾಣಿಕರನ್ನು ಹೊತ್ತೊಯ್ಯುವ ಎಕ್ಸ್ ಪ್ರಸ್ ರೈಲುಗಳ ಆಗಮನದ ವೇಳೆ ರೇಲ್ವೆ ನಿಲ್ದಾಣದಲ್ಲಿ ಗೂಡ್ಸ್ ಗಾಡಿಗಳು ನಿಲುಗಡೆಯಾಗುತ್ತಿರುವುದರಿಂದ ರೈಲ್ವೆ ಪ್ರಯಾಣಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.
ಬೆಳಿಗ್ಗೆ 10 ಗಂಟೆಯಿಂದ 10.30ರೊಳಗೆ ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುವ ಇಂಟರ್ ಸಿಟಿ ರೈಲು, ಬೆಂಗಳೂರಿನಿಂದ ದಾದಾರ್ಗೆ ತೆರಳುವ ಚಾಲುಕ್ಯ ಹಾಗೂ ಧಾರವಾಡದಿಂದ ಬೆಂಗಳೂರಿಗೆ ತೆರಳುವ ಇಂಟರ್ ಸಿಟಿ ಎಕ್ಸಪ್ರೆಸ್ ರೈಲುಗಳು ಆಗಮಿಸುತ್ತವೆ.
ಈ ಸಮಯದಲ್ಲಿ 50ರಿಂದ 60 ಭೋಗಿಗಳು ಇರುವ ಗೂಡ್ಸ್ ಗಾಡಿ ನಿಲುಗಡೆಯಾಗುತ್ತಿರುವುದರಿಂದ ಯಾವ ಫ್ಲಾಟ್ ಫಾರಂಗೆ ಯಾವ ರೈಲು ಆಗಮಿಸುತ್ತದೆ ಎಂಬ ಗೊಂದಲವಾಗುತ್ತಿದೆ. ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗುವ ಜೊತೆಗೆ ರೈಲ್ವೆ ಪ್ರಯಾಣದಿಂದ ವಂಚಿರಾಗುವಂತಾಗಿದೆ.
ಸಂಬಂಧಪಟ್ಟ ರೇಲ್ವೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಏಕ್ಸ್ ಪ್ರಸ್ ರೈಲುಗಳು ಆಗಮಿಸುವ ವೇಳೆ ಗೂಡ್ಸ್ ಗಾಡಿಗಳ ನಿಲುಗಡೆಗೆ ಪಯಾರ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ರೇಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.