ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೀತ ಪದ್ಧತಿ ಸಮಾಜ ತಲೆತಗ್ಗಿಸುವ ವಿಚಾರ

Parashurama
Updated On : 14 Feb 2013, 10:54 am

ಕಡೂರು: ಆಧುನಿಕ ಯುಗದಲ್ಲಿಯೂ ಜೀತ ಪದ್ಧತಿ ಮುಂದುವರಿಯುತ್ತಿರುವುದು ನಾಗರಿಕ  ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ಜೀವಿಕ ಸಂಸ್ಥೆ ರಾಜ್ಯ ಸಂಚಾಲಕ ವಿಜಯಕುಮಾರಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬೆಂಗಳೂರಿನ ಜೀವಿಕ ಸಂಸ್ಥೆ, ತಾಲೂಕು ಆಡಳಿತ ಮತ್ತು ಸಿಡಿಪಿಒ ಇಲಾಖೆ ಸಹಯೋಗದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನಾ ಕಾರ್ಯಗಾರದಲ್ಲಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಮಾರಾಟ ಮಾಡುವುದು,
ಅಸ್ಪೃಶ್ಯತೆ ಆಚರಣೆ ಹಾಗೂ ವ್ಯಕ್ತಿಗಳ ಮಾರಾಟ ಜೀತ ಪದ್ಧತಿಯಡಿ ಬರುವ ಅಂಶಗಳಾಗಿವೆ.
ನಿರ್ಮೂಲನೆ: 1976 ರಲ್ಲಿ ಜೀತಪದ್ಧತಿ ವಿರೋಧಿ ಕಾನೂನು ಜಾರಿ ನಂತರ ಕರ್ನಾಟಕದಲ್ಲಿ 67,708 ಜೀತದಾಳುಗಳನ್ನು ವಿಮುಕ್ತಿಗೊಳಿಸುವ ಮೂಲಕ ಕರ್ನಾಟಕ ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಜೀತಪದ್ಧತಿ ನಿರ್ಮೂಲನೆಗೆ ತಾಪಂ ಹಾಗೂ ಗ್ರಾಪಂ ಸಮೀಕ್ಷೆ ನಡೆಸಿದ ಯಾವುದೇ ಸಂಸ್ಥೆ ಮರು ಸಮೀಕ್ಷೆ ನಡೆಸಿದಾಗ ಜೀತ ಪದ್ಧತಿ ಮುಂದುವರಿಕೆ ಕಂಡುಬಂದಲ್ಲಿ ಅಂತಹ ಪಂಚಾಯ್ತಿಗಳು ರದ್ದಾಗುತ್ತವೆ ಎಂದು ಎಚ್ಚರಿಸಿದರು.
ಇಂದಿಗೂ ಜೀವಂತ: ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸದಸ್ಯ ಪಿ.ಜಿ. ಸಗುನಪ್ಪ ಮಾತನಾಡಿ, ಜೀತ ಪದ್ಧತಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿ ಜೀವಿಕ ಸಂಸ್ಥೆ ಸೇರಿದಂತೆ ಪ್ರತಿಯೊಬ್ಬರೂ ಕೈ ಜೋಡಿಸಿ ಎಂದರು.
ಮುಖ್ಯವಾಹಿನಿಗೆ: ಕಾರ್ಯಾಗಾರ ಉಧ್ಘಾಟಿಸಿದ ಸಿಡಿಪಿಒ ಓಂಕಾರಪ್ಪ ಮಾತನಾಡಿ, ಸಮೀಕ್ಷೆ ಸಮಯದಲ್ಲಿ ಜೀತದಾಳುಗಳು ಕಂಡು ಬಂದಲ್ಲಿ ಕೂಡಲೇ ಅವರನ್ನು ಜೀತದಿಂದ ಮುಕ್ತಿಗೊಳಿಸಿ ಪುನರ್ವಸತಿ ಸೇರಿದಂತೆ ಎಲ್ಲ ಸವಲತ್ತು ನೀಡಬೇಕು  ಎಂದು ಅವರು ಹೇಳಿದರು.
ಉಪತಹಸೀಲ್ದಾರ್ ಮೋಹನ್ ಕುಮಾರ್, ಶಿರಸ್ತೇದಾರ್ ಸತ್ಯನಾರಾಯಣ, ತಿಪ್ಪೇಸ್ವಾಮಿ, ಸಗುನಪ್ಪ, ಎನ್.ಕೆ. ಬಸವರಾಜಪ್ಪ, ಗುರುರಾಜ್ ಹಾಲ್ಮತ್, ಆರ್. ರಾಮಸ್ವಾಮಿ, ಗಂಗಹನುಮಯ್ಯ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು,  ವಿವಿಧ ಇಲಾಖಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments