ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಹಿತಿ ಬೆಳವಾಡಿಗೆ ಕಾಳೀ ಪುರಸ್ಕಾರ

Parashurama
Updated On : 14 Feb 2013, 11:11 am

ಚಿಕ್ಕಮಗಳೂರು: ಸಾಹಿತಿ ಬೆಳವಾಡಿ ಮಂಜುನಾಥ್ ಅವರು ರಾಜ್ಯಮಟ್ಟದ ಪ್ರತಿಷ್ಠಿತ 'ಕಾಳೀ ಪುರಸ್ಕಾರ'ಕ್ಕೆ ಭಾಜನರಾಗಿದ್ದಾರೆ.
ಅವರ ಸಾರಸ್ವತ ಸಿಂಚನ ಎಂಬ ಸಂಶೋಧನ ಕೃತಿಯು 2011ನೇ ಸಾಲಿನ ಪುರಸ್ಕಾರಕ್ಕೆ ಮಾನ್ಯವಾಗಿದ್ದು, ಇದೇ ಫೆ.26ರಂದು ಚಿಕ್ಕಮಗಳೂರಿನಲ್ಲಿ ಪ್ರದಾನ ಮಾಡಲಾಗುವುದೆಂದು ಆಯ್ಕೆ ಸಮಿತಿ ಅಧ್ಯಕ್ಷ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪುರಸ್ಕಾರವು 10 ಸಾವಿರ ನಗದು, ಫಲಕ ಒಳಗೊಂಡಿದ್ದು, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಸಿ.ಎಸ್. ರಾಮಚಂದ್ರ, ಸತ್ಯನಾರಾಯಣರಾವ್, ರಾಜೇಂದ್ರ ವಿ. ಬಂಡಿವಾಡ್ ಹಾಗೂ ಪಾಲಾಕ್ಷಮೂರ್ತಿ ಅವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಿದೆ.
30 ಗ್ರಂಥಗಳ ರಚನೆ: ಬೆಳವಾಡಿ ಮಂಜುನಾಥ್ ಅವರು ಸ್ನೇಹಸೇತು, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕಾಮಧೇನು ಪುರಸ್ಕಾರ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ಇಪ್ಪತ್ತೆಂಟು ಸ್ವತಂತ್ರ ಕೃತಿಗಳನ್ನು ರಚಿಸುವುದರೊಂದಿಗೆ ಮೂವತ್ತು ಗ್ರಂಥಗಳ ಸಂಪಾದಕರಾಗಿದ್ದಾರೆ.
ರಾಜ್ಯ ಪಠ್ಯ ಪುಸ್ತಕ ಸಮಿತಿ ಸದಸ್ಯರಾಗಿ, ಪರಿಶೀಲಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಳದನಿ, ಸಾರಸ್ವತ ಸಿಂಚನ, ಸಂವತ್ಸರ, ಭಾಮಿನಿ ಭಾಸ್ಕರ, ಗುಣ-ಗೌರವ, ಸಮಾಜ ಮುಖಿ, ದವಳ ಚರಿತ, ಕುವೆಂಪು ವರ್ಷ, ಚಿಂತನ-ಮಂಥನ ಅಂತ-ಕರಣ ಕನ್ನಡದಲ್ಲಿ ಪ್ರಬಂಧ ಸಾಹಿತ್ಯ, ಸ್ವಾತಂತ್ರ್ಯ ಸಂಗ್ರಾಮ ಮತ್ತು ನವೋದಯ, ರತ್ನಾಕರವರ್ಣಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments