ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜವಾಬ್ದಾರಿ ಹೆಚ್ಚಿಸುವ ಸನ್ಮಾನಗಳು

Parashurama
Updated On : 15 Feb 2013, 11:47 am

ಬೀರೂರು: ಸನ್ಮಾನಗಳು ಯಾವಾಗಲೂ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ತಾಲೂಕು ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಮಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಬಿ.ಆರ್. ರೂಪ ಹೇಳಿದರು.
ಸ್ಥಳೀಯ ಸಂಸ್ಥೆಗಳ ಐದು ವರ್ಷಗಳ ಆಡಳಿತ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಬೀರೂರು ಪುರಸಭೆ ಸದಸ್ಯರು ಪುರಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ತಮ್ಮ ಮೂರೂವರೆ ವರ್ಷದ ಆಡಳಿತದ ಅವಧಿಯಲ್ಲಿ ತಾಲೂಕು ಅಭಿವೃದ್ಧಿಗೆ ಒತ್ತುಕೊಟ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಮತ್ತು ಕ್ಷೇತ್ರದ ಜನತೆಯ ಸಹಕಾರವನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಅಧಿಕಾರಿಗಳು ಜನತೆಯ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಜನರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಈ ನಿಟ್ಟಿನಲ್ಲಿ ರೂಪರವರು ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ವರ್ಗ ಮತ್ತು ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಪುರಸಭೆಯ ಸದಸ್ಯರಾದ ಎಂ.ಪಿ. ದಯಾನಂದ್, ಡಿ.ಆರ್. ಯತೀಶ್, ಬಿ.ಕೆ. ಶಶಿಧರ್, ಬಾವಿಮನೆ ಪ್ರಕಾಶ್, ಸುಕನ್ಯಾ ಪ್ರಭಾಕರ್, ಎಂ.ಎಸ್. ರಮೇಶ್, ಜಯರಾಂ,ಅರೇಕಲ್ ಸತೀಶ್, ಶಾಂತಮ್ಮ, ವಿಜಯಮ್ಮ, ಬಿ.ಟಿ. ಸಾಕಮ್ಮ, ರೇಣುಕಾ ಏಕಾಂತ್, ರುದ್ರಪ್ಪ, ದೇವರಾಜ್, ಖಲೀಲ್ ಅಹಮದ್, ರವಿಕುಮಾರ್, ರವಿಚಂದ್ರ, ನಾಮಕರಣ ಸದಸ್ಯರಾದ ಪಾಂಡುರಂಗರಾವ್, ಬಸವರಾಜು, ಮಲ್ಲಪ್ಪ, ತಿಪ್ಪೇಶ್, ಮುಖ್ಯಾಧಿಕಾರಿ ಓಂಕಾರಮೂರ್ತಿ, ಅಭಿಯಂತರ ಭಾಸ್ಕರ್, ವ್ಯವಸ್ಥಾಪಕ ಚಂದ್ರಶೇಖರ್, ಪ್ರಕಾಶ್, ದೇವರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement