ನಗರಸಭೆ ಅಧ್ಯಕ್ಷರು, ಸದಸ್ಯರಿಗೆ ವಿದಾಯ
ಚಿಕ್ಕಮಗಳೂರು: ನಗರಸಭೆಯಲ್ಲಿ ಕಳೆದ 5 ವರ್ಷಗಳಿಂದ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ್ದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಬುಧವಾರ ನಗರಸಭೆಯಿಂದ ಬೀಳ್ಕೊಡಲಾಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ಸಿಬ್ಬಂದಿಗಳು ಪರಸ್ಪರ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಆಡಳಿತ ಮತ್ತು ವಿರೋಧ ಪಕ್ಷ ಎಂಬ ಭೇದ ಬದಿಗೊತ್ತಿ ಮಹಿಳಾ ಸದಸ್ಯರಾದಿಯಾಗಿ ಸೇರಿದ್ದ ಎಲ್ಲರೂ ಒಬ್ಬರಿಗೊಬ್ಬರು ಹಸ್ತಲಾಗುವ ನೀಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಮೊದಲ ಬೀಳ್ಕೊಡಿಗೆ ಸಮಾರಂಭ: ಪೌರಾಯುಕ್ತ ಹೆಚ್.ಜಿ. ಪ್ರಭಾಕರ್ ಮಾತನಾಡಿ, ಶಾಲಾ ಕಾಲೇಜು ದಿನದ ನೆನಪು ಈ ಬೀಳ್ಕೊಡುಗೆ ಸಮಾರಂಭದಲ್ಲಿ ಮರುಕಳಿಸುತ್ತಿವೆ. ನನ್ನ ವೈಯುಕ್ತಿಕ ಜೀವನದಲ್ಲಿ ಅಧಿಕಾರಿಯಾಗಿ ಇದೇ ಮೊದಲ ಬೀಳ್ಕೊಡಿಗೆ ಸಮಾರಂಭ ಎಂದು ಆಡಳಿತಾವಧಿಯಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಭಾವನಾತ್ಮಕವಾದ ಒಡನಾಟ ಮತ್ತು ಎಲ್ಲ ಸದಸ್ಯರು ಗೌರಯುತವಾಗಿ ನಡೆದು ಕೊಂಡು ಸಾರ್ವಜನಿಕ ಹಿತದೃಷ್ಟಿ ಹೊಂದಿ ಕೆಲವೊಮ್ಮೆ ಹೊರತುಪಡಿಸಿ ಕಾರ್ಯ ಒತ್ತಡ ಮಾಡದೆ ಸಹಕರಿಸಿದ್ದೀರಿ. ಸದಸ್ಯರು ಪಕ್ಷ ಬೇಧ ಮೆರೆತು ಊರಿನ ಅಭಿವೃದ್ಧಿಗೆ ಸ್ಪಂದಿಸಿ ಮಲೆನಾಡಿನ ಜನ ಸುಸಂಸ್ಕೃತರು ಎಂಬುದನ್ನು ತೋರಿಸಿದ್ದೀರಿ. ಅಭಿವೃದ್ಧಿ ವಿಷಯದಲ್ಲಿ ನಗರಸಭೆ ಮುಂದೆಯು ನಿಮ್ಮೊಂದಿಗಿರುತ್ತದೆ ಎಂದರು.
ಸಾಧನೆ ಮಾಡಿದ್ದೇನೆ ಎಂದು ಹೇಳಲ್ಲ: ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಪ್ರೇಂಕುಮಾರ್ ಮಾತನಾಡಿ, ಒಳ್ಳೆ ಕೆಲಸದ ಬಗ್ಗೆ ಯೋಚಿಸುವ ಯಾವುದೇ ವ್ಯಕ್ತಿಗೂ ಅವಕಾಶಗಳು ಸಿಗುತ್ತದೆ. ಸಾಧನೆ ಮಾಡಿದ್ದೇನೆ ಎಂದು ಹೇಳಲು ಬಯಸುವುದಿಲ್ಲ ಎಲ್ಲರ ಒಗ್ಗಟ್ಟು ಪ್ರದರ್ಶನದಿಂದ ಸಚಿವರ ಸಹಕಾರದಿಂದ ಅಭಿವೃದ್ಧಿಯಲ್ಲಿ ನಗರಸಭೆ ಇತಿಹಾಸ ಸೃಷ್ಟಿಸಿದೆ. ಇಚ್ಛಾಶಕ್ತಿಯ ಕಾರಣದಿಂದ ನಗರದ ಚಿತ್ರಣ ಬದಲಾಗಿ ಜನರ ಮನದಲ್ಲಿದ್ದ ನರಕ ಸಭೆ ಎಂಬ ಭಾವನೆ ದೂರ ಮಾಡುವಲ್ಲಿ ಕೊಂಚ ಯಶಸ್ಸು ಕಂಡಿದ್ದೇವೆಂದರು.
ಸಾಮೂಹಿಕ ಸಹಕಾರ: ವೈಯುಕ್ತಿಕವಾಗಿ ಮಾಡಿದ್ದಲ್ಲ, ಇವೆಲ್ಲವು ಸಾಮೂಹಿಕವಾಗಿ ಸಹಕರಿಸಿದ್ದರ ಪ್ರತಿಫಲ ಜೊತೆಗೆ ಪೌರಾಯುಕ್ತರ ಶ್ರಮ ಅಡಗಿದೆ ಎಂದರು.
ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಮಾಜಿ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ, ಶ್ರೀಧರ್ ಉರಾಳ್, ಜಿ.ಎಸ್. ಚಂದ್ರಪ್ಪ, ಅಧಿಕಾರಿಗಳಾದ ವೈದೇಹಿ, ಕಾಂತರಾಜ್, ಬಸವರಾಜ್ ಮಾತನಾಡಿದರು. ನಂತರ ಎಲ್ಲಾ ಸದಸ್ಯರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.