ಬೀರೂರು ಪುರಸಭಾ ಸದಸ್ಯರಿಗೆ ಬೀಳ್ಕೊಡುಗೆ
ಬೀರೂರು: ಸ್ಥಳೀಯ ಪುರಸಭೆಯ ಜನಪ್ರತಿನಿಧಿಗಳ ಐದು ವರ್ಷಗಳ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಹಾಗು ಪುರಸಭೆ ಸಿಬ್ಬಂದಿ ವರ್ಗದಿಂದ ನಿರ್ಗಮಿತ ಪುರಸಭಾ ಸದಸ್ಯರಿಗೆ ಆತ್ಮೀಯ ಬೀಳ್ಕೊಡುಗೆಯೊಂದಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮುಖ್ಯಾಧಿಕಾರಿ ಓಂಕಾರಮೂರ್ತಿ ಮಾತನಾಡಿ,ಜನಪ್ರತಿನಿಧಿಗಳಿಂದ ಅಭಿವೃದ್ಧಿ ಕಾರ್ಯ ಚುರುಕುಗೊಳ್ಳುವ ಜೊತೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ, ಸಮಾಧಾನ ದೊರಕುತ್ತಿತ್ತು ಎಂದು ಹೇಳಿ ಅಭಿವೃದ್ಧಿಗೆ ಶ್ರಮಿಸಿದ ಸದಸ್ಯರಿಗೆ ಅಭಿನಂದಿಸಿದರು.
ಅಭಿಯಂತರ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಎಸ್. ಕುಮಾರಸ್ವಾಮಿ ಮಾತನಾಡಿ, ಜನಸೇವೆ ಮುಖ್ಯವಾಗಿದ್ದು ಹಾಗಾದಾಗ ಸೇವೆಗೆ ಮಹತ್ವ ಬರುತ್ತದೆ. ಬಡವರಿಗೆ ಒಳ್ಳೆಯದನ್ನು ಮಾಡಿದಾಗ ಜನಪ್ರತಿನಿಧಿಗಳು ಗೌರವ ಹೆಚ್ಚಾಗುತ್ತದೆ. ಪ್ರೀತಿ ವಿಶ್ವಾಸದಿಂದ ಕಠಿಣ ಸಮಸ್ಯೆಗಳನ್ನು ಪರಿಹರಿಸಬಹುದು ಎಂದರು. ಪತ್ರಕರ್ತರು ಸೇರಿದಂತೆ ಎಲ್ಲರನ್ನೂ ಸನ್ಮಾನಿಸಲಾಯಿತು.