2ನೇ ವರ್ಷದ ವಾರ್ಷಿಕೋತ್ಸವ
ನರಸಿಂಹರಾಜಪುರ: ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಜ್ಞಾನದೀವಿಗೆ ಒಕ್ಕೂಟದ 2 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳು ಶಾಲೆ ಆವರಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದ ಯಡಗೆರೆ ವೆಂಕಟರಮಣ ವಹಿಸಿದ್ದರು. ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯನಿ ಅಸುಂತ ಸಿಕ್ವೇರಾ, ಶಿಕ್ಷಕ ಸುರೇಶ್, ಶಿಕ್ಷಕಿ ವಾಗ್ದೇವಿ, ಒಕ್ಕೂಟದ ಅಧ್ಯಕ್ಷ ನೇರಳೆ ರಾಘವೇಂದ್ರ ಭಟ್, ಕಾರ್ಯದರ್ಶಿ ಪ್ರಶಾಂತ್ ಹಾಗೂ ಮುಖಂಡ ವಿ. ಪ್ರದೀಪ್ ಉಪಸ್ಥಿತರಿದ್ದರು. ಒಕ್ಕೂಟದ ವತಿಯಿಂದ ಕುದುರೆಗುಂಡಿ ಶಾಲೆಯಲ್ಲಿ 2011-12 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಡಿ.ಆರ್. ಸುಬ್ರಮಣ್ಯ, ಕೀರ್ತಿ ಹಾಗೂ ನಿಶಾದ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಮರಣ ಶಕ್ತಿ ಪರೀಕ್ಷೆಯಲ್ಲಿ -ಪ್ರಥಮ ನೇತ್ರಾ, ದ್ವಿತೀಯ ಅಪೂರ್ವ, ತೃತೀಯ ರಾಜೇಶ್. ಭಾವಗೀತೆ ಸ್ಪರ್ಧೆ - ಪ್ರಥಮ ನೇತ್ರಾ, ದ್ವಿತೀಯ ಸಹನಾ. ಜಾನಪದ ಗೀತೆ ಸ್ಪರ್ಧೆ- ಪ್ರಥಮ ಸಹನಾ, ದ್ವಿತೀಯ ತಸ್ರೀನಾ.