ಅತಿಯಾದ ಮದ್ಯಪಾನ: ವ್ಯಕ್ತಿ ಸಾವು
ನರಸಿಂಹರಾಜಪುರ: ಅತಿಯಾದ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ತಾಲೂಕು ಪಂಚಾಯಿತಿ ಎದರು ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಕಡಹಿನ ಗ್ರಾಪಂನ ಬಣಗಿ ತಿಮ್ಮಪ್ಪ (68) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ತಿಮ್ಮಪ್ಪ ಬೆಳಗ್ಗೆ 8.30ಕ್ಕೆ ಮನೆಯಿಂದ ಹೊರಟು ನರಸಿಂಹರಾಜಪುರ ಪೇಟೆಗೆ ಬಂದಿದ್ದರು ಎಂದು ತಿಳಿಯಲಾಗಿದೆ. ಅತಿಯಾದ ಮದ್ಯಪಾನ ಮಾಡಿರುವುದೇ ತಿಮ್ಮಪ್ಪ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.