ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದಿನಿಂದ ನಾಮಪತ್ರ ಸಲ್ಲಿಕೆ

Mainashree
Updated On : 16 Feb 2013, 11:31 am

ಚಿಕ್ಕಮಗಳೂರು: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ 2007ರ ಮೀಸಲಾತಿ ಪ್ರಕಾರ ಮಾ.7ರಂದು ಮತದಾನ ನಡೆಯಲಿದ್ದು, ಶನಿವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಜಿಲ್ಲೆಯ ಒಂದು ನಗರಸಭೆ, ಮೂರು ಪುರಸಭೆ, ನಾಲ್ಕು ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. 8 ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 149162 ಮತದಾರರು ಇದ್ದಾರೆ. ಮತದಾರರ ವಿವರ ಈ ಕೆಳಕಂಡಂತೆ ಇದೆ. ಚಿಕ್ಕಮಗಳೂರು ನಗರಸಭೆಯ ವ್ಯಾಪ್ತಿಯಲ್ಲಿ 74278 ಮತದಾರರು ಇದ್ದು, ಈ ಪೈಕಿ 37011 ಪುರುಷರು, 37267 ಮಹಿಳೆಯರು. ಕಡೂರು ಪುರಸಭೆಯಲ್ಲಿ 20801 ಮತದಾರರಲ್ಲಿ 10611 ಪುರುಷರು, 10190 ಮಹಿಳೆಯರು, ಬೀರೂರು ಪುರಸಭೆಯಲ್ಲಿ 14745 ಮತದಾರರಲ್ಲಿ 7422 ಪುರುಷರು, 7323 ಮಹಿಳೆಯರು, ತರೀಕೆರೆ ಪುರಸಭೆಯಲ್ಲಿ 22687 ಮತದಾರಲ್ಲಿ 11584 ಪುರುಷರು, 11103 ಮಹಿಳಾ ಮತದಾರರು ಇದ್ದಾರೆ.
ಎನ್.ಆರ್. ಪುರ: ಎನ್.ಆರ್.ಪುರ ಪಟ್ಟಣ ಪಂಚಾಯ್ತಿಯಲ್ಲಿ 4511 ಮತದಾರರು ಇದ್ದು, ಈ ಪೈಕಿ 2293 ಪುರುಷರು, 2218 ಮಹಿಳೆಯರು, ಕೊಪ್ಪ ಪಟ್ಟಣ ಪಂಚಾಯ್ತಿಯಲ್ಲಿ 2981 ಮತದಾರರಲ್ಲಿ 1523 ಪುರುಷರು, 1458 ಮಹಿಳೆಯರು, ಶೃಂಗೇರಿ ಪಟ್ಟಣ ಪಂಚಾಯ್ತಿಯಲ್ಲಿ 2838 ಮತದಾರರಿದ್ದು, ಈ ಪೈಕಿ 1407 ಪುರುಷರು, 1431 ಮಹಿಳೆಯರು, ಮೂಡಿಗೆರೆ ಪಟ್ಟಣ ಪಂಚಾಯ್ತಿಯಲ್ಲಿ 6321 ಮತದಾರರಿದ್ದು, ಈ ಪೈಕಿ 3175 ಪುರುಷರು, 3136 ಮಹಿಳಾ ಮತದಾರರು ಇದ್ದಾರೆ. ಚುನಾವಣಾ ನೀತಿ ಸಂಹಿತೆ ಫೆ.15ರ ಬೆಳಗ್ಗೆಯಿಂದಲೇ ಜಾರಿಗೆ ಬಂದಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಅಂದರೆ ಮಾರ್ಚ್ 11ರವರೆಗೆ ಜಾರಿಯಲ್ಲಿರುತ್ತದೆ. ಈ ನೀತಿ ಸಂಹಿತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಮಾತ್ರ ಅನ್ವಯವಾಗಲಿದ್ದು, ಜಿಲ್ಲಾಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement