ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನರಿಗೆ ಕಾನೂನು ಅರಿವು ಅಗತ್ಯ

Mainashree
Updated On : 16 Feb 2013, 11:31 am

ಕಡೂರು: ಭಾರತ ಕಾನೂನುಗಳ ಅಡಿಯಲ್ಲಿರುವ ದೇಶವಾಗಿದ್ದು, ದೇಶದ ಅಗತ್ಯತೆಗೆ ಅನುಗುಣವಾಗಿ ಕಾನೂನು  ತಿದ್ದುಪಡಿಯಾಗುತಿದ್ದು, ಆ ನಿಟ್ಟಿನಲ್ಲಿ ಪ್ರಚಲಿತ ಕಾನೂನುಗಳ ಬಗ್ಗೆ ಜನರಿಗೆ ಅರಿವಿನ ಅಗತ್ಯವಿದೆ ಎಂದು ಕಡೂರು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶೋಭಾರಾಣಿ ಬಿ. ಹಿರೇಮಠ್ ಹೇಳಿದರು.     
ಅವರು ಕಡೂರು ನ್ಯಾಯಾಲಯ ಆವರಣದಲ್ಲಿ ನಡೆದ ಅರೆಕಾಲಿಕ ಸ್ವಯಂ ಸೇವಕರಿಗೆ ಕಾನೂನು ತಿಳಿವಳಿಕೆ  ನೀಡಲು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಏರ್ಪಡಿಸಿದ್ದ ವಿದ್ಯಾಪ್ರಸಾರ ಶಿಬಿರ ಹಾಗು ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.       
ಅರಿವು ಅಗತ್ಯ: ಕಾನೂನಿನ ಆಳ ಹಾಗೂ ಅದರ ಜಟಿಲತೆ ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸಬೇಕು. ಭಾರತದಲ್ಲಿ ಅಗತ್ಯತೆಗೆ ಅನುಗುಣವಾಗಿ ಕಾನೂನು ತಿದ್ದುಪಡಿ ಆಗುತ್ತಿರುತ್ತವೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುವುದು. ಸ್ವಯಂ ಸೇವಕರಲ್ಲಿ ಶಿಕ್ಷಕರಿದ್ದು, ಅವರು ವಿದ್ಯಾರ್ಥಿಗಳಿಗೆ ಈ ವಿಚಾರಗಳನ್ನು ತಿಳಿಸಬೇಕು  ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀನಿವಾಸಗೌಡ ಮಾತನಾಡಿ, ಜನರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶ ಹಾಗೂ ಜನತಾ ನ್ಯಾಯಾಲ ಗ್ರಾಮೀಣರಿಗೆ ಅರಿವು ಮೂಡಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಚಿಂತನೆ ಫಲವೇ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಎಂದವರು ಹೇಳಿದರು.
ಇತರರಿಗೂ ಅರಿವು: ಅಧ್ಯಕ್ಷತೆ ವಹಿಸಿದ್ದ ಕಾನೂನು ಸೇವಾ ಸಮಿತಿ ಅಧ್ಯಕ್ಷ ದೇವರಾಜ್ ಮಾತನಾಡಿ, ನಾವು ಪಡೆದ ಜ್ಞಾನವನ್ನು ಬಯಸಿದವರಿಗೆ ನೀಡಬೇಕು. ಹಾಗೆಯೇ ಇಲ್ಲಿ ಪಡೆದ ಕಾನೂನಿನ ಅರಿವನ್ನು ಇತರರಿಗೆ ನೀಡಬೇಕು ಎಂದರು.
ಕಾರ್ಯಾಗಾರದಲ್ಲಿ  ಹಲವಾರು ಸ್ವಯಂ ಸೇವಕರಿಗೆ ವಿವಿಧ ಕಾನೂನುಗಳ ಬಗ್ಗೆ ತರಬೇತಿ ನೀಡಲಾಯಿತು.  ವಕೀಲ ಕೆ.ಎನ್. ಬೊಮ್ಮಣ್ಣ, ವಕೀಲರ ಸಂಘದ ಪದಾಧಿಕಾರಿಗಳು, ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement