ರಂಗಕಲೆ ಜನರಿಗೆ ತಲುಪಿಸುವುದೇ ನಾಟಕದ ಉದ್ದೇಶ
ತರೀಕೆರೆ: ರಂಗಕಲೆ ಇಡೀ ಜಗತ್ತಿನಲ್ಲೇ ಜನಜೀವನಕ್ಕೆ ಹೊಂದಿಕೊಂಡಂತಿದೆ ಎಂದು ಚಲನಚಿತ್ರ ನಟ, ರಂಗನಿರ್ದೇಶಕ ಮಂಡ್ಯ ರಮೇಶ್ ಹೇಳಿದರು.
ಅವರು, ಶುಕ್ರವಾರ ಪಟ್ಟಣದ ಶಾಂತಿ ಚಾರಿಟಬಲ್ ಟ್ರಸ್ಟ್, ಅರುಣೋದಯ ವಿದ್ಯಾಸಂಸ್ಥೆ, ನಟನ ಮೈಸೂರು ಕಲಾವಿದರು ತರೀಕೆರೆಯಲ್ಲಿ ಅಭಿನಯಿಸುವ ಮಂಡ್ಯ ರಮೇಶ್ ನಿರ್ದೇಶಿಸಿರುವ ಮಹತ್ವದ ಮೂರು ನಾಟಕಗಳ ಪ್ರದರ್ಶನ, ಮಂಡ್ಯ ರಮೇಶ್ ನಾಟಕೋತ್ಸವ ಹಿನ್ನೆಲೆಯಲ್ಲಿ ಅರುಣೋದಯ ವಿದ್ಯಾ ಸಂಸ್ಥೆ ಆವರಣದಲ್ಲಿ ಏರ್ಪಾಡಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಿಕ್ಷಣ- ರಂಗಕಲೆಯನ್ನು ಜನರಿಗೆ ತಲುಪಿಸುವುದೇ ನಾಟಕ ಪ್ರದರ್ಶನದ ಮೂಲ ಉದ್ದೇಶವಾಗಿದೆ, ರಂಗಭೂಮಿಯ ಮೂಲಕ ಶಿಕ್ಷಣ, ನಾಟಕದ ಕಲಿಕೆ ಹಾಗೂ ಆಧುನಿಕ ಚಿಂತನೆಗಳನ್ನು ನಿರ್ವಹಿಸಬಹುದು, ಸಾಮಾಜಿಕವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನವದೆಹಲಿ, ಬೆಂಗಳೂರು ಮತ್ತು ಚಾಮರಾಜನಗರದಲ್ಲಿ ಮೂರು ನಾಟಕಗಳ ಯಶಸ್ವಿ ಪ್ರದರ್ಶನವನ್ನು ನೀಡಲಾಗಿದೆ ಎಂದು ತಿಳಿಸಿದ ಅವರು ತರೀಕೆರೆಯಲ್ಲಿ ನಾಟಕೋತ್ಸವ ಏರ್ಪಡಿಸಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದರು.
ಅರುಣೋದಯ ವಿದ್ಯಾಸಂಸ್ಥೆ ಡಾ. ಶ್ರೀಹರ್ಷ ಮಾತನಾಡಿದರು. ಕಲಾವಿದ ರಾಮು ಇದ್ದರು.