ಗುರುದತ್ತ ಚರಿತೆಗೆ ಐತಿಹಾಸಿಕ ಪ್ರಾಮುಖ್ಯತೆ
ಚಿಕ್ಕಮಗಳೂರು: ಗುರುದತ್ತ ಚರಿತೆ ಪೌರಾಣಿಕ ಮಹತ್ವದಂತೆ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಮಧ್ಯಯುಗದಲ್ಲಿ ಹಿಂದೂ ಧರ್ಮವನ್ನು ಪುನಶ್ಚೇತನಗೊಳಿಸಿದ ಹಿರಿಮೆ ದತ್ತಾತ್ರೇಯ ಪರಂಪರೆಗೆ ಇದೆ ಎಂದು ಡಾ.ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ಉದ್ಭವ ಪ್ರಕಾಶನ, ಮಲೆನಾಡು ವಿದ್ಯಾಸಂಸ್ಥೆ, ತಾಲೂಕು ಗಮಕ ಕಲಾಪರಿಷತ್, ನಗರದ ಶ್ರೀಮತಿ ಸುಂದರಮ್ಮ ಶಂಕರಮೂರ್ತಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೆಳವಾಡಿ ಮಂಜುನಾಥ್ ಸಂಪಾದಕತ್ವದ ಸತ್ಯವಿಠಲ ವಿರಚಿತ “VÚßÁÚߥÚ}Ú¡ ಚರಿತಂ OÛÈÚÀ’ ಲೋಕಾರ್ಪಣೆ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದತ್ತಚರಿತಂ ಕಾವ್ಯ ವೇದ, ಪುರಾಣ, ಉಪನಿಷತ್ತುಗಳ ಸಾರಸಂಗ್ರಹವಾಗಿದ್ದು ಕಥನವಾಗಿ ಆಕರ್ಷಣೀಯವಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರ ತ್ರಿಮೂರ್ತಿ ಭಾವ ಏಕರೂಪದಲ್ಲಿ ವ್ಯಕ್ತವಾಗಿದ್ದು ಸಮಾನತೆಯ ಸಂಕೇತವಾಗಿದೆ. ದತ್ತಾತ್ರೇಯರು ತಂಗಿದ್ದರೆಂದು ನಂಬಿರುವ ಸ್ಥಳಗಳೆಲ್ಲ ಸಿದ್ಧಿ ಕ್ಷೇತ್ರಗಳಾಗಿವೆ ಎಂದು ಸೂಚಿಸಿದರು.
“VÚßÁÚß ¥Ú}Ú¡^ÚÂ}ÚM’ ಕಾವ್ಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಡಾ.ಡಿ.ಎಲ್. ವಿಜಯಕುಮಾರ್, ಸರ್ವಧರ್ಮ ಸಮನ್ವಯವನ್ನು ಜಗತ್ತಿಗೆ ಸಾರಿದ ದತ್ತಾತ್ರೇಯರನ್ನು ನಾನಾ ಕಾರಣಗಳಿಂದ ಒಂದು ಪಂಗಡಕ್ಕೆ ಸೇರಿಸುವುದು ದುರಂತ ಎಂದರು.
ಈ ಕಾವ್ಯ ಇತಿಹಾಸದ ಮಹತ್ವದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಕಾವ್ಯವಾಗಿದೆ. ಗದ್ಯಾನುವಾದ ಮತ್ತು ಉತ್ತಮ ಮುನ್ನುಡಿಯೊಂದಿಗೆ ಪ್ರಕಟವಾಗಿದ್ದು ಸುಲಭವಾಗಿ ಎಲ್ಲರೂ ಓದಬಹುದಾಗಿದೆ ಎಂದು ಹೇಳಿದರು.
ಸಾಂಸ್ಥಿಕ ರೂಪದ ಚಲನಶೀಲತೆ: ವಿಚಾರಗೋಷ್ಠಿಯಲ್ಲಿ ಮಾತನಾಡಿದ ಸಂಸ್ಕೃತಿ ಚಿಂತಕ ಡ್ಯಾನಿ ಪಿರೇರಾ, ತಾಯಿಯ ಆತ್ಮದರ್ಶನ ಮಾಡಿಸಿದವರು ದತ್ತಾತ್ರೇಯರು. ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿದ್ದನ್ನು, ಐತಿಹಾಸಿಕವಾಗಿ ಸಂಕ್ರಮಣ ಸ್ಥಿತಿಯಲ್ಲಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಿದ ಹಿರಿಮೆ ದತ್ತಾತ್ರೇಯರಿಗಿದೆ. ಲೋಕಕಲ್ಯಾಣಕ್ಕಾಗಿ ಯಾರು ಸಮರ್ಪಿಸಿಕೊಳ್ಳುತ್ತಾರೋ ಅಂಥವರು ಮಾತ್ರ ಜಗದ್ಗುರು, ಅಂಥವರು ಜಗದ್ವಂದ್ಯರು. ದತ್ತಾತ್ರೇಯರು ಆದಿಗುರು. ಅವರಲ್ಲಿ ಸಾಂಸ್ಥಿಕ ರೂಪದ ಚಲನಶೀಲತೆ ಕಾಣಬಹುದು ಎಂದರು.
ದತ್ತಾತ್ರೇಯರ ಅಧ್ಯಾತ್ಮದ ನೆಲೆಗಳು ಸಂಕೀರ್ಣವಾಗಿದೆ. ಜಂಗಮ ಸ್ವರೂಪಿಯಾದ ಜ್ಞಾನವೈಭವ ಮತ್ತು ಅವತಾರ ವೈವಿಧ್ಯತೆಗಳಿವೆ. ಭಾರತೀಯ ಸಂಸ್ಕೃತಿಯ ಪ್ರಮುಖ ಅಂಶಗಳು ದತ್ತಾತ್ರೇಯ ಪರಿಕಲ್ಪನೆಯಲ್ಲಿರುವುದೇ ಒಂದು ವಿಶೇಷ ಎಂದು ಹೇಳಿದರು.
ಸಂಸ್ಕೃತಿ ರೂಪ: ಐತಿಹಾಸಿಕ ನೆಲಗಳನ್ನು ಕುರಿತು ವಿಚಾರ ಮಂಡಿಸಿದ ಜೆ.ಪಿ. ಪುಷ್ಪಲತಾ ಅವರು, ದತ್ತಾತ್ರೇಯರು ಪರಂಪರೆ ಮತ್ತು ಸಂಸ್ಕೃತಿಯ ಪ್ರತಿರೂಪ. ಪರಕೀಯ ದಾಳಿಯ ಸಂದರ್ಭದಲ್ಲಿ ಭಾಗವತ ವಿವೇಕವನ್ನು ಮೂಡಿಸಿ ಭಾವೈಕ್ಯತೆಯನ್ನು ತರುವ ಮಹತ್ವದ ಹೊಣೆ ಅಂದಿನ ಮುಂದಾಳುಗಳಲ್ಲಿತ್ತು. ಅದನ್ನು ದತ್ತಪರಿಕಲ್ಪನೆಯ ಮೂಲಕ ಸಾಕಾರಗೊಳಿಸಿದರು. ಆಧುನಿಕತೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುವ ಆತಂಕಕ್ಕೆ ದತ್ತಾತ್ರೇಯ ತತ್ವ ಚಿಕಿತ್ಸಕ ರೂಪದ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಚ್.ಡಿ. ಸೋಮೇಗೌಡ ಮಾತನಾಡಿ, ಓದುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲೂ ವಿಶಿಷ್ಟ ಪುಸ್ತಕಗಳು ಪ್ರಕಟವಾಗುತ್ತಿವೆ. ಗ್ರಂಥಗಳನ್ನು ಕೊಂಡು ಓದುವ ಮೂಲಕ ಭಾಷೆ, ಸಾಹಿತ್ಯ ಬೆಳೆಸಬೇಕೆಂದರು.
ಎಂ. ಶಂಕರಮೂರ್ತಿ ಕವಿ ಸತ್ಯವಿಠಲರನ್ನು ಸನ್ಮಾನಿಸಿದರು. ಗುರುದತ್ತ ಚರಿತಂ ಕಾವ್ಯದ ಸಂಪಾದಕ ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಭವ್ಯ ಸ್ವಾಗತಿಸಿ, ರೇಖಾ ನಾಗರಾಜರಾವ್ ವಂದಿಸಿದರು.